Select Your Language

Notifications

webdunia
webdunia
webdunia
webdunia

India attacks Pakistan: ಪಾಕಿಸ್ತಾನಕ್ಕೆ ಭಾರತ ಎಷ್ಟು ಹೊಡೆತ ನೀಡಿದೆ ಕೆಲವೇ ಕ್ಷಣಗಳಲ್ಲಿ ಸಿಗಲಿದೆ ಅಪ್ ಡೇಟ್

Operation Sindoor

Krishnaveni K

ನವದೆಹಲಿ , ಶುಕ್ರವಾರ, 9 ಮೇ 2025 (09:54 IST)
ನವದೆಹಲಿ: ಪಾಕಿಸ್ತಾನಕ್ಕೆ ಭಾರತ ಎಷ್ಟು ಹೊಡೆತ ನೀಡಿದೆ, ಎಲ್ಲೆಲ್ಲಿ ದಾಳಿ ಮಾಡಿದೆ ಎಂಬುದಕ್ಕೆ ನಿಖರವಾದ ವಿವರ ಇನ್ನು ಕೆಲವೇ ಕ್ಷಣಗಳಲ್ಲಿ ಸಿಗಲಿದೆ. ಭಾರತದ ರಕ್ಷಣಾ ಇಲಾಖೆ ಅಧಿಕೃತ ಮಾಹಿತಿ ನೀಡಲಿದೆ.

ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿರುವ ಬಗ್ಗೆ ಹಲವು ವರದಿಗಳು ಕೇಳಿಬರುತ್ತಿವೆ. ಇದರಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂದು ಗೊತ್ತಾಗುತ್ತಿಲ್ಲ. ಭಾರತ ಎಲ್ಲೆಲ್ಲಿ ದಾಳಿ ಮಾಡಿದೆ ಎಂಬ ನಿಖರ ಸುದ್ದಿ ತಿಳಿಯಲು ಈಗ ಎಲ್ಲರೂ ರಕ್ಷಣಾ ಇಲಾಖೆಯ ಅಧಿಕೃತ ಪ್ರಕಟಣೆಗಾಗಿ ಎದಿರು ನೋಡುತ್ತಿದ್ದಾರೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ರಕ್ಷಣಾ ಇಲಾಖೆ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ಪ್ರಕಟಿಸಲಿದೆ. ಭಾರತ ಐಎನ್ಎಸ್ ವಿಕ್ರಾಂತ್ ಬಳಸಿ ಕರಾಚಿ ಬಂದರು ಪುಡಿಗಟ್ಟಿದೆ ಎಂದು ವರದಿಯಾಗಿದೆ. ಇಸ್ಲಾಮಾಬಾದ್, ಸಿಯಾಲ್ ಕೋಟ್ ಸೇರಿದಂತೆ ಹಲವೆಡೆ ದಾಳಿ ಮಾಡಿರುವ ಸುದ್ದಿಯಾಗಿದೆ.

ಇದರ ಬಗ್ಗೆ ಈಗ ಸ್ವತಃ ರಕ್ಷಣಾ ಇಲಾಖೆಯೇ ಅಧಿಕೃತ ಮಾಹಿತಿ ನೀಡಲಿದೆ. ಆಪರೇಷನ್ ಸಿಂಧೂರ್ ನಡೆಸಿದ ಬಳಿಕ ರಕ್ಷಣಾ ಇಲಾಖೆ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

India Pakistan war: ಭಾರತದ ಬಗ್ಗೆ ಸುಳ್ಳಿನ ಕಂತೆ ಹರಡುತ್ತಿರುವ ಪಾಕಿಸ್ತಾನ