ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರವನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲು ಯತ್ನಿಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮುಗಿಬಿದ್ದು ದಾಳಿ ನಡೆಸುತ್ತಿದೆ. ಇದೀಗ ನೇರವಾಗಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಮೇಲೆಯೇ ಕ್ಷಿಪಣಿ ದಾಳಿ ನಡೆಸಿದೆ.
ಜಮ್ಮು ಕಾಶ್ಮೀರವನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲು ಯತ್ನಿಸಿದ ಪಾಕಿಸ್ತಾನದ ಕ್ಷಿಪಣಿಗಳನ್ನು ಭಾರತದ ಏರ್ ಡಿಫೆನ್ಸ್ ಹೊಡೆದುರುಳಿಸಿದ್ದು, ಯಾವುದೇ ನಷ್ಟವಾಗಿಲ್ಲ ಎಂಬ ಪ್ರಕಟಣೆಯನ್ನು ಸ್ವತಃ ರಕ್ಷಣಾ ಇಲಾಖೆ ಪ್ರಕಟಣೆ ನೀಡಿದೆ.
ಇದೀಗ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಮುಗಿಬಿದ್ದಿದೆ. ನೇರವಾಗಿ ಪಾಕ್ ರಾಜಧಾನಿ ಇಸ್ಲಾಮಾಬಾದ್ ನತ್ತ ದಾಳಿ ಮಾಡಿದೆ. ಈ ಮೂಲಕ ಲಾಹೋರ್, ಸಿಯಾಲ್ ಕೋಟ್ ಮತ್ತು ಇದೀಗ ಇಸ್ಲಾಮಾಬಾದ್ ನ್ನು ಗುರಿಯಾಗಿಸಿ ದಾಳಿ ಮಾಡಿದೆ.