ಇಸ್ಲಾಮಾಬಾದ್: ಒಂದೆಡೆ ಭಾರತದಿಂದ ದಾಳಿ ಭೀತಿ, ಇನ್ನೊಂದೆಡೆ ಪಾಕಿಸ್ತಾನ ಸೈನಿಕರಿಗೆ ಬಲೂಚಿಸ್ತಾನ ಹೋರಾಟಗಾರರ ಕಾಟ. ಬಲೂಚಿಸ್ತಾನ ಆರ್ಮಿ ದಾಳಿಗೆ ಪಾಕಿಸ್ತಾನದ 14 ಸೈನಿಕರ ಮೃತದೇಹ ಛಿದ್ರ ಛಿದ್ರವಾದ ವಿಡಿಯೋ ಇಲ್ಲಿದೆ ನೋಡಿ.
ಪಾಕಿಸ್ತಾನ ಸೇನೆಯ ವಿಶೇಷ ಕಾರ್ಯನಿರ್ವಹಣಾ ಕಮಾಂಡರ್ ತಾರಿಕ್ ಇಮ್ರಾನ್, ಸುಬೇದಾರ್ ಉಮರ್ ಫಾರೂ ಸೇರಿದಂತೆ 14 ಪಾಕಿಸ್ತಾನ ಸೈನಿಕರು ಬಲೂಚಿಸ್ತಾನ ಪ್ರತ್ಯೇಕತಾ ಆರ್ಮಿ ದಾಳಿಗೆ ಮೃತಪಟ್ಟಿದ್ದಾರೆ.
ಬಲೂಚಿಸ್ತಾನ ಲಿಬರೇಶನ್ ಆರ್ಮಿ ಸುಧಾರಿತ ಸ್ಪೋಟಕ ಬಳಸಿ ಸೇನಾ ವಾಹನದಲ್ಲಿ ತೆರಳುತ್ತಿದ್ದ ಪಾಕಿಸ್ತಾನಿ ಸೈನಿಕರನ್ನು ಕೊಂದು ಹಾಕಿದೆ. ಕಡಿದಾದ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ.
ಸ್ಪೋಟದ ತೀವ್ರತೆಗೆ ಸೈನಿಕರ ದೇಹಗಳು ಛಿದ್ರ ಛಿದ್ರವಾಗಿ ಹಾರಿಬಿದ್ದಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ ವಾರವಷ್ಟೇ ಪಾಕ್ ಸೈನಿಕರು ಬಲೂಚಿಸ್ತಾನ ಉಗ್ರರನ್ನು ಕೊಂದು ಹಾಕಿತ್ತು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ.