ಲಾಹೋರ್: ಭಾರತದ ಆಪರೇಷನ್ ಸಿಂದೂರ್ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಲಾಹೋರ್ ನಲ್ಲಿ ಪ್ರಬಲ ಸ್ಪೋಟವಾದ ವರದಿಯಾಗಿದೆ. ಇದರ ಹಿಂದಿನ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಲಾಹೋರ್ ನಗರದಲ್ಲಿ ಹಲವು ಪ್ರಬಲ ಸ್ಪೋಟ ಕೇಳಿಬಂದಿದೆ. ಪ್ರತ್ಯಕ್ಷದರ್ಶಿಗಳು ಈ ಮಾಹಿತಿ ನೀಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದರಿಂದಾಗಿ ಲಾಹೋರ್ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ. ಸ್ಪೋಟದ ಸದ್ದಿಗೆ ಜನ ಭಯಭೀತರಾದರು.
ಭಾರತದ ಜೊತೆಗೆ ಯುದ್ಧದ ವಾತಾವರಣದ ಬೆನ್ನಲ್ಲೇ ಬೆಳ್ಳಂ ಬೆಳಿಗ್ಗೆ ಲಾಹೋರ್ ನಲ್ಲಿ ಸ್ಪೋಟದ ಸದ್ದು ಕೇಳಿ ಜನ ನಿಜಕ್ಕೂ ಗಾಬರಿಯಾಗಿದ್ದಾರೆ. ಸ್ಪೋಟದ ಸದ್ದಿನ ಜೊತೆಗೆ ದಟ್ಟ ಹೊಗೆಯೂ ಕಾಣಿಸಿಕೊಂಡಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿನ್ನೆಯಷ್ಟೇ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂದೂರ ಹೆಸರಿನಲ್ಲಿ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಈಗ ಲಾಹೋರ್ ನಲ್ಲಿ ಸ್ಪೋಟ ಸಂಭವಿಸಿದೆ.