ಜಮ್ಮು ಕಾಶ್ಮೀರ: ಆಪರೇಷನ್ ಸಿಂದೂರ ಬೆನ್ನಲ್ಲೇ ಹೆಂಡ ಕುಡಿದ ಕೋತಿಯಂತೆ ಆಡುತ್ತಿರುವ ಪಾಕಿಸ್ತಾನ ಸೇನೆ ಹುಚ್ಚು ಹುಚ್ಚಾಗಿ ಭಾರತದ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಭಾರತದ ಓರ್ವ ವೀರ ಯೋಧ ಹುತಾತ್ಮನಾಗಿದ್ದಾರೆ.
ಪಾಕಿಸ್ತಾನ ಸೇನೆ ರಾತ್ರಿ ನಡೆಸಿದ ಶೆಲ್ ದಾಳಿಯಲ್ಲಿ 5 ಫೀಲ್ಡ್ ರೆಜಿಮೆಂಟ್ ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಮೃತಪಟ್ಟಿದ್ದಾರೆ. ನಿನ್ನೆ ತಡರಾತ್ರಿ ಭಾರತದ ಮುಂಚೂಣಿ ಠಾಣೆಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ದಾಳಿ ನಡೆಸಿತ್ತು.
ದಾಳಿಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಯೋಧ ದಿನೇಶ್ ಕುಮಾರ್ ಕೊನೆಗೆ ಹುತಾತ್ಮರಾದರು. ಆದರೆ ತಮ್ಮ ಕೊನೆಯ ಉಸಿರಿನವರೆಗೂ ತಾಯ್ನಾಡಿನ ರಕ್ಷಣೆಗಾಗಿ ಹೋರಾಡಿದರು ಎಂದು ಸೇನೆ ಪ್ರಕಟಣೆ ತಿಳಿಸಿದೆ.
32 ವರ್ಷದ ಹುತಾತ್ಮ ಯೋಧ ಮೂಲತಃ ಹರ್ಯಾಣದವರು. ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ಪ್ರದೇಶದಲ್ಲೇ ಅವರು ಕರ್ತವ್ಯ ಸಲ್ಲಿಸುತ್ತಿದ್ದರು. ಇದೀಗ ಪಾಕ್ ಪಡೆಗಳ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡುವ ಸಂದರ್ಭದಲ್ಲಿ ಹುತಾತ್ಮರಾಗಿದ್ದಾರೆ.