ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂದೂರಕ್ಕೆ ಬೆಚ್ಚಿಬಿದ್ದಿರುವ ಪಾಕಿಸ್ತಾನ ಈಗ ಪ್ರತೀಕಾರದ ಮಾತುಗಳನ್ನು ಆಡುತ್ತಿದೆ. ನಮ್ಮ ಪ್ರತೀ ರಕ್ತದ ಹನಿಗೂ ಸೇಡು ತೀರಿಸಿಕೊಳ್ಳಲಿದ್ದೇವೆ ಎಂದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಶಪಥ ಮಾಡಿದ್ದಾರೆ. ಭಾರತದ ಆಪರೇಷನ್ ಸಿಂದೂರ ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ ಈ ರೀತಿ ಶಪಥ ಮಾಡಿದ್ದಾರೆ.
ನಿನ್ನೆ ತಡರಾತ್ರಿ ಭಾರತದ ಯುದ್ಧ ವಿಮಾನಗಳು ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಕೊಂದ ಉಗ್ರರ ಮೇಲೆ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು.
ತನ್ನ ನೆಲದ ಮೇಲೆ ಭಾರತ ದಾಳಿ ನಡೆಸಿ ಉಗ್ರರನ್ನು ಕೊಂದ ಬೆನ್ನಲ್ಲೇ ಪಾಕಿಸ್ತಾನ ಅಂಡು ಸುಟ್ಟ ಬೆಕ್ಕಿನಂತೆ ಆಡುತ್ತಿದೆ. ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಶಹಬಾಜ್ ಷರೀಫ್ ನಮ್ಮ ಪ್ರತೀ ರಕ್ತ ಹನಿಗೂ ಸೇಡು ತೀರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಸೇನೆಗೆ ಪರಮಾಧಿಕಾರ ನೀಡಲಾಗಿದೆ. ಭಾರತ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಕೊನೆಯುಸಿರುವವರೆಗೂ ನಾವು ದೇಶದ ಉಳಿವಿಗಾಗಿ ಹೊರಾಡಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.