Select Your Language

Notifications

webdunia
webdunia
webdunia
webdunia

Video: ಜಮ್ಮು ಮೇಲೆ ದಾಳಿಗೆ ಯತ್ನಿಸಿದ ಪಾಕಿಸ್ತಾನ, ಲಾಹೋರ್ ನತ್ತ ನುಗ್ಗಿದ ಭಾರತ

Jammu Kashmir

Krishnaveni K

ಜಮ್ಮು ಕಾಶ್ಮೀರ , ಗುರುವಾರ, 8 ಮೇ 2025 (22:12 IST)
ಜಮ್ಮು ಕಾಶ್ಮೀರ: ಆಪರೇಷನ್ ಸಿಂಧೂರ್ ಗೆ ಪ್ರತೀಕಾರ ತೀರಿಸಲು ಜಮ್ಮು ಕಾಶ್ಮೀರವನ್ನು ಗುರಿಯಾಗಿಸಿ ದಾಳಿ ನಡೆಸಲು ಪಾಕಿಸ್ತಾನ ಯತ್ನಿಸಿದೆ. ಇತ್ತ ಲಾಹೋರ್ ನನ್ನೇ ಗುರಿಯಾಗಿಸಿ ಭಾರತ ಕ್ಷಿಪಣಿ ದಾಳಿ ನಡೆಸಿ ಪಾಕ್ ಸಂಚನ್ನು ವಿಫಲಗೊಳಿಸಿದೆ.

ಪಾಕಿಸ್ತಾನ ದಾಳಿ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಕಂಪ್ಲೀಟ್ ಬ್ಲ್ಯಾಕ್ ಔಟ್ ಮಾಡಲಾಗಿದೆ. ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಉರಿ ಸೆಕ್ಟರ್ ನಲ್ಲಿ ಪಾಕ್ ಸೈನಿಕರು ಶೆಲ್ ದಾಳಿ ನಡೆಸಿದ್ದು ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.

ಪಾಕಿಸ್ತಾನ ವಾಯುದಾಳಿ ಯತ್ನ ವಿಫಲಗೊಳಿಸಿರುವ ಭಾರತ ಈಗ ಉಗ್ರ ಹಫೀಜ್ ಸಯೀದ್ ಬೆಚ್ಚಗೆ ಕೂತಿರುವ ಲಾಹೋರ್ ನನ್ನೇ ಗುರಿಯಾಗಿಸಿ ದಾಳಿ ನಡೆಸಿದೆ.

ಇನ್ನು ಇದರ ಬೆನ್ನಲ್ಲೇ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಜೊತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ತುರ್ತು ಮಾತುಕತೆ ನಡೆಸಿದ್ದಾರೆ. ಅಮೆರಿಕಾ ಕೂಡಾ ಭಾರತದ ಬೆಂಬಲಕ್ಕೆ ನಿಂತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Operation Sindoor ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಭಾರತದಲ್ಲಿರುವ ಪಾಕ್‌ ಮಹಿಳೆ