Select Your Language

Notifications

webdunia
webdunia
webdunia
webdunia

Operation Sindoor: ನಮ್ಮನ್ನು ಇಲ್ಲಿಂದ್ದೊಮ್ಮೆ ಕಳುಹಿಸಿ, ಪಾಕ್‌ನಲ್ಲಿ ಬೇಡುತ್ತಿರುವ ವಿದೇಶಿ ಆಟಗಾರರು

ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯ

Sampriya

ಪಾಕಿಸ್ತಾನ , ಗುರುವಾರ, 8 ಮೇ 2025 (19:48 IST)
Photo Credit X
ಪಾಕಿಸ್ತಾನದ ಹಲವು ಕಡೆ ಭಾರತೀಯ ಸಶಸ್ತ್ರ ಪಡಗಳು ನಡೆಸಿದ ದಾಳಿ ಬಳಿ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಸಂಜೆ ನಿಗದಿಯಾಗಿದ್ದ ಪಾಕಿಸ್ತಾನ್ ಸೂಪರ್ ಲೀಗ್ (PSL) ಪೇಶಾವರ್ ಝಲ್ಮಿ ಮತ್ತು ಕರಾಚಿ ಕಿಂಗ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಪಾಕಿಸ್ತಾನ್‌ ಸೂಪರ್‌ ಲೀಗ್‌ನ ಉಳಿದ ಎಲ್ಲ ಪಂದ್ಯಗಳನ್ನು ಕರಾಚಿ, ದೋಹಾ ಮತ್ತು ದುಬೈ ಎಂಬ ಮೂರು ಸ್ಥಳಗಳಿಗೆ ಸ್ಥಳಾಂತರಿಸಲು ಪಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ.

ಭಾರತದ ದಾಳಿ ಮತ್ತು ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ ಪಿಎಸ್ಎಲ್ ಯೋಜಿಸಿದಂತೆ ಮುಂದುವರಿಯುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬುಧವಾರ ಹೇಳಿದೆ.

"ರಾವಲ್ಪಿಂಡಿಯಲ್ಲಿ ನಡೆದ ಪಿಎಸ್ಎಲ್ ಪಂದ್ಯವನ್ನು ದಾಳಿಯ ನಂತರ ರದ್ದುಗೊಳಿಸಲಾಯಿತು, ವಿದೇಶಿ ಆಟಗಾರರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಪಂದ್ಯ ಇಂದು ರಾತ್ರಿಯಾಗಿತ್ತು. ಅನೇಕರು ಈಗ ಆದಷ್ಟು ಬೇಗ ದೇಶವನ್ನು ತೊರೆಯಲು ಬಯಸುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ನಿರ್ಧರಿಸುತ್ತದೆ" ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಐಎಎನ್ಎಸ್ಗೆ ತಿಳಿಸಿದರು.

ಮೇ 7 ರ ಮುಂಜಾನೆ, ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (Pok) ನಾದ್ಯಂತ ಒಂಬತ್ತು ಅತ್ಯುನ್ನತ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಟ್ಟುಕೊಂಡು ನಿಖರವಾದ ದಾಳಿಗಳನ್ನು ನಡೆಸಿತು. ಪಹಲ್ಗಾಮ್‌ನಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆಯನ್ನು ಬಲಿ ತೆಗೆದುಕೊಂಡ ಭೀಕರ ಭಯೋತ್ಪಾದಕ ದಾಳಿಗೆ ಇದೀಗ ಭಾರತ ಪ್ರತೀಕಾರ ತೀರಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಐಪಿಎಲ್‌ 2025ರ ನಂತ್ರ ನಿವೃತ್ತಿಯಾಗಬಹುದಾದ 6 ಕ್ರಿಕೆಟ್‌ ದಿಗ್ಗಜರು ಇವರೇ