ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಮೂರು ರಾಜ್ಯಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸುತ್ತಿದ್ದರೆ ಇತ್ತ ಭಾರತದ ಏರ್ ಡಿಫೆನ್ಸ್ ಸಿಸ್ಟಂ ಅದನ್ನು ಯಶಸ್ವಿಯಾಗಿ ತಡೆಹಿಡಿದಿದೆ.
ರಜೌರಿಯನ್ನು ಗುರಿಯಾಗಿರಿಸಿ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ್ದು ಇದನ್ನು ಭಾರತದ ಏರ್ ಡಿಫೆನ್ಸ್ ಸಿಸ್ಟಂ ಅಗಸದಲ್ಲಿಯೇ ತಡೆಹಿಡಿದಿದೆ. ಮಿಂಚಿನ ವೇಗದಲ್ಲಿ ಕ್ಷಿಪಣಿಗಳು ಅಪ್ಪಳಿಸುವ ಮತ್ತು ಅದನ್ನು ಅಷ್ಟೇ ಪ್ರಬಲವಾಗಿ ಭಾರತ ಹೊಡೆದುರುಳಿಸುವ ವಿಡಿಯೋಗಳು ಭಯಾನಕವಾಗಿದೆ.
ಕ್ಷಿಪಣಿ ದಾಳಿಯಾಗುತ್ತಿದ್ದಂತೇ ಜಮ್ಮು ಕಾಶ್ಮೀರದಲ್ಲಿ ಜನ ಭಯಭೀತರಾದರು. ಅತ್ತ ಲಾಹೋರ್ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ್ದು, ಅಲ್ಲಿಯೂ ಸಂಪೂರ್ಣ ಬ್ಲ್ಯಾಕ್ ಔಟ್ ಮಾಡಲಾಗಿತ್ತು. ಲಾಹೋರ್ ನಲ್ಲಿಯೂ ಜನ ಭಯಭೀತರಾಗಿ ಮನೆಯೊಳಗೇ ಅವಿತು ಕೂರುವ ಪರಿಸ್ಥಿತಿಯಾಗಿದೆ. ಕ್ಷಿಪಣಿ ದಾಳಿಯ ಭಯಾನಕ ವಿಡಿಯೋ ಇಲ್ಲಿದೆ ನೋಡಿ.