Select Your Language

Notifications

webdunia
webdunia
webdunia
webdunia

India Pakistan war: ಭಾರತದ ಬಗ್ಗೆ ಸುಳ್ಳಿನ ಕಂತೆ ಹರಡುತ್ತಿರುವ ಪಾಕಿಸ್ತಾನ

India attacks Pakistan

Krishnaveni K

ನವದೆಹಲಿ , ಶುಕ್ರವಾರ, 9 ಮೇ 2025 (09:43 IST)
Photo Credit: X
ನವದೆಹಲಿ: ನೇರವಾಗಿ ಹೋರಾಡಿ ಗೆಲ್ಲಲಾಗದ ರಣಹೇಡಿ ಪಾಕಿಸ್ತಾನ, ಭಾರತದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳಿನ ಕಂತೆಯನ್ನೇ ಹರಡುತ್ತಿದೆ.

ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತ ಉಗ್ರರ ಅಡುಗುದಾಣಗಳ ಮೇಲೆ ದಾಳಿ ಮಾಡಿದ ಬಳಿಕ ಪಾಕಿಸ್ತಾನ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡುತ್ತಿದೆ. ಮೊದಲು ಭಾರತೀಯ ಸೇನೆ ಬಿಳಿ ಬಾವುಟ ಹಾರಿಸಿ ನಮಗೆ ಶರಣಾಗಿದೆ ಎಂದಿತ್ತು.

ನಿನ್ನೆ ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡಿ ವಿಫಲವಾದ ಬಳಿಕ ಪಾಕಿಸ್ತಾನ ಸುಳ್ಳಿನ ಕಂತೆಯನ್ನೇ ಹರಡುತ್ತಿದೆ. ರಜೌರಿಯಲ್ಲಿ ಉಗ್ರರು ಆತ್ಮಹತ್ಯಾ ಬಾಂಬರ್ ಗಳಾಗಿ ದಾಳಿ ಮಾಡಿದ್ದಾರೆ ಎಂದಿತ್ತು. ಬಳಿಕ ಪಾಕ್ ಸೆನೆ ಭಾರತದ ರಫೇಲ್ ಯುದ್ಧ ವಿಮಾನಗಳನ್ನು, ಡ್ರೋಣ್ ಗಳನ್ನು ಹೊಡೆದುರುಳಿಸಿದೆ ಎಂದು ಹಳೇ ಫೋಟೋ ತೋರಿಸಿ ಕೊಚ್ಚಿಕೊಂಡಿತ್ತು.

ಆದರೆ ಇದೆಲ್ಲವೂ ಸುಳ್ಳು ಎಂದು ಸಾಬೀತಾಗಿದೆ. ಸ್ವತಃ ಭಾರತದ ರಕ್ಷಣಾ ಇಲಾಖೆಯೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ನೇರವಾಗಿ ಯುದ್ಧ ಮಾಡಿ ಗೆಲ್ಲಲಾಗದ ಪಾಕಿಸ್ತಾನ ಈಗ ಸುಳ್ಳು ಸುದ್ದಿ ಹಬ್ಬುತ್ತಿದೆ. ಇದೇ ಕಾರಣಕ್ಕೆ ನಿನ್ನೆ ಮತ್ತೆ ಭಾರತ ಹಲವು ಪಾಕ್ ಪ್ರೇರಿತ ಸೋಷಿಯಲ್ ಮೀಡಿಯಾಗಳನ್ನು ಬ್ಲಾಕ್ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

India Pakistan war: S-400 ಭಾರತದ ಸುದರ್ಶನ ಚಕ್ರ, ನಮ್ಮನ್ನು ರಕ್ಷಿಸಿದ್ದು ಹೇಗೆ