ನವದೆಹಲಿ: ಭಾರತದ 15 ನಗರಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ದಾಳಿ ಮಾಡುತ್ತಿದ್ದರೆ ಇತ್ತ ಭಾರತವನ್ನು ರಕ್ಷಿಸಿದ್ದು ಎಸ್-400 ಎಂಬ ಸುದರ್ಶನ ಚಕ್ರ. ಅಷ್ಟಕ್ಕೂ ಈ ಎಸ್-40 ನಮ್ಮ ಸೇನೆ ಸೇರಿದ್ದು ಹೇಗೆ, ಇದು ನಮ್ಮನ್ನು ರಕ್ಷಿಸಿದ್ದು ಹೇಗೆ ಇಲ್ಲಿದೆ ನೋಡಿ ವಿವರ.
ಈ ಹಿಂದೆ ಮೋದಿ ಸರ್ಕಾರದಲ್ಲಿ ಮನೋಹರ್ ಪರಿಕ್ಕರ್ ರಕ್ಷಣಾ ಮಂತ್ರಿಯಾಗಿದ್ದಾಗ ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಂಡು ಈ ಏರ್ ಡಿಫೆನ್ಸ್ ವ್ಯವಸ್ಥೆಯನ್ನು ಭಾರತಕ್ಕೆ ಸೇರ್ಪಡೆಗೊಳಿಸಿದ್ದರು. ಇದುವೇ ಈಗ ಭಾರತವನ್ನು ಕಾಪಾಡುತ್ತಿದೆ.
ಎಲ್ಲಾ ದೇಶಗಳೂ ವಿದೇಶೀ ದಾಳಿಯನ್ನು ತಡೆಯಲು ಏರ್ ಡಿಫೆನ್ಸ್ ವ್ಯವಸ್ಥೆ ಮಾಡಿಕೊಂಡಿರುತ್ತದೆ. ತಮ್ಮ ದೇಶದೊಳಗೆ ಶತ್ರು ದೇಶದ ಕ್ಷಿಪಣಿಗಳು ದಾಳಿ ಮಾಡಿದರೆ ಅದನ್ನು ಆಕಾಶದಲ್ಲೇ ತಡೆಯಲು ಏರ್ ಡಿಫೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ.
ಪಾಕಿಸ್ತಾನ ಬಳಿಯೂ ಚೀನಾ ನಿರ್ಮಿತ ಏರ್ ಡಿಫೆನ್ಸ್ ವ್ಯವಸ್ಥೆ ಮಾಡಿಕೊಂಡಿತ್ತು. ಆದರೆ ಅದು ಭಾರತದ ದಾಳಿಯನ್ನು ತಡೆಯುವಲ್ಲಿ ವಿಫಲವಾಗಿದೆ. ಆದರೆ ಭಾರತದ ರಷ್ಯಾ ನಿರ್ಮಿತ ಎಸ್-400 ಎಂಬ ಸುದರ್ಶನ ಚಕ್ರ ಪಾಕಿಸ್ತಾನದ ಕ್ಷಿಪಣಿಗಳು, ಡ್ರೋಣ್ ಗಳು, ಎಫ್-16 ಎಂಬ ಅಮೆರಿಕಾ ನಿರ್ಮಿತ ಯುದ್ಧ ನೌಕೆಗಳನ್ನು ಹೊಡೆದುರುಳಿಸಿ ಭಾರತವನ್ನು ರಕ್ಷಿಸಿದೆ. ಬಹುಶಃ ಅಂದು ಮನೋಹರ್ ಪರಿಕ್ಕರ್ ಎಸ್-400 ಭಾರತಕ್ಕೆ ತರಲು ಶ್ರಮ ವಹಿಸದೇ ಇದ್ದಿದ್ದರೆ ಇಂದು ಈ ಸುದರ್ಶನ ಭಾರತದ ಬತ್ತಳಿಕೆಯಲ್ಲಿ ಇರುತ್ತಿರಲಿಲ್ಲ.