ಧರ್ಮಶಾಲಾ: ಪಾಕಿಸ್ತಾನ ಜಮ್ಮು ಕಾಶ್ಮೀರ ಸೇರಿದಂತೆ ಮೂರು ರಾಜ್ಯಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲು ಯತ್ನಿಸಿದ ಬೆನ್ನಲ್ಲೇ ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯವನ್ನು ಅರ್ಧಕ್ಕೇ ಸ್ಥಗಿತಗೊಳಿಸಿ ಮನೆಗೆ ಹೋಗಿ ಎಂದು ಪ್ರೇಕ್ಷಕರಿಗೆ ಸೂಚಿಸಲಾಯಿತು.
ಜಮ್ಮು ಕಾಶ್ಮೀರವನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ವಿಮಾನ ದಾಳಿ ನಡೆಸಲು ಯತ್ನಿಸುತ್ತಿದ್ದಂತೇ ಇತ್ತ ಧರ್ಮಶಾಲಾದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯವನ್ನು ಅರ್ಧದಲ್ಲಿಯೇ ನಿಲ್ಲಿಸಲಾಯಿತು.
ಬಳಿಕ ಮೈದಾನದ ಸಿಬ್ಬಂದಿಗಳು, ಆಯೋಜಕರು ಘೋಷಣೆ ಮಾಡಿ ಪ್ರೇಕ್ಷಕರನ್ನು ಮನೆಗೆ ತೆರಳುವಂತೆ ಸೂಚನೆ ನೀಡಿದೆ. ಆಟಗಾರರು, ಸಿಬ್ಬಂದಿಗಳನ್ನು ತಕ್ಷಣವೇ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಸುರಕ್ಷತಾ ದೃಷ್ಟಿಯಿಂದ ಪಂದ್ಯ ಸ್ಥಗಿತಗೊಳಿಸಲಾಗಿದೆ.
ರಾಜಸ್ಥಾನ, ಗುಜರಾತ್ ಮತ್ತು ಜಮ್ಮು ಕಾಶ್ಮೀರವನ್ನು ಪಾಕಿಸ್ತಾನ ಟಾರ್ಗೆಟ್ ಮಾಡಿದ್ದು, ಈ ರಾಜ್ಯಗಳಲ್ಲಿ ಇಂದು ರಾತ್ರಿಯಿಡೀ ವಿದ್ಯುತ್, ದೀಪಗಳನ್ನು ಆರಿಸಿ ಬ್ಲ್ಯಾಕ್ ಔಟ್ ಮಾಡಲಾಗಿದೆ.
ಇತ್ತೀಚೆಗಿನ ವರದಿ ಬಂದಾಗ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ.