ಕೊಚ್ಚಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಿನ್ನೆ ನಡೆಸಿದ ಆಪರೇಷನ್ ಸಿಂಧೂರ್ ನನಗೆ ಭಾರತೀಯಳಾಗಿ ನಾಚಿಕೆಯಾಗ್ತಿದೆ ಎಂದು ಮಲಯಾಳಂ ನಟಿ ಅಮಿನಾ ಹೇಳಿಕೊಂಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಪಹಲ್ಗಾಮ್ ನಲ್ಲಿ ಪಾಕ್ ಬೆಂಬಲಿತ ಉಗ್ರರು ಅಮಾಯಕ 26 ಪ್ರವಾಸಿಗರನ್ನು ಕೊಂದು ಹೆಣ್ಣು ಮಕ್ಕಳ ಕುಂಕುಮ ಅಳಿಯುವಂತೆ ಮಾಡಿದ್ದರು. ಇದಕ್ಕೆ ಇಡೀ ದೇಶವೇ ಪಾಕಿಸ್ತಾನವನ್ನು ಮುಗಿಸಿಬಿಡುವಷ್ಟು ಆಕ್ರೋಶದಲ್ಲಿತ್ತು.
ಆದರೆ ಭಾರತೀಯ ಸೇನೆ ಸಾಕಷ್ಟು ಯೋಜನೆ ರೂಪಿಸಿ ಉಗ್ರರ ಅಡಗುದಾಣಗಳನ್ನು ಗುರಿಯಾಗಿರಿಸಿ ದಾಳಿ ಮಾಡಿತ್ತು. ಇದರಲ್ಲಿ 100 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಆದರೆ ಈ ಘಟನೆ ಈ ಮಲಯಾಳಂ ನಟಿಗೆ ನಾಚಿಕೆಗೇಡಿನ ಸಂಗತಿಯಂತೆ.
ತನ್ನ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದುಕೊಂಡಿರುವ ಈಕೆ ನನಗೆ ಭಾರತೀಯಳಾಗಿ ಈ ದಾಳಿ ಬಗ್ಗೆ ನಾಚಿಕೆಯಾಗ್ತಿದೆ. ಕೊಲ್ಲುವುದೇ ಎಲ್ಲದಕ್ಕೂ ಪರಿಹಾರವಲ್ಲ. ದೇಶದಲ್ಲಿ ಸಾಕಷ್ಟು ಉತ್ತರ ಸಿಗದ ಪ್ರಶ್ನೆಗಳಿರುವಾಗ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ ನೆನಪಿರಲಿ ಯುದ್ಧ ಶಾಂತಿಯನ್ನು ತರುವುದಿಲ್ಲ. ನಾನು ಇದನ್ನು ಬೆಂಬಲಿಸುವುದಿಲ್ಲ. ಪಹಲ್ಗಾಮ್ ದಾಳಿಗೆ ಇದರಿಂದ ಪ್ರತೀಕಾರ ಮಾಡಿದಂತಾಯಿತು ಎನ್ನುವವರು ನಿಜಕ್ಕೂ ತಪ್ಪು ಕಲ್ಪನೆ ಹೊಂದಿದ್ದಾರೆ. ಇದೊಂದು ನಾಗಿರಕರನ್ನು ಕಳೆದುಕೊಳ್ಳುವ ಯುದ್ಧ ಎಂದು ನಟಿ ಬರೆದುಕೊಂಡಿದ್ದಾಳೆ. ಆಕೆಯ ಪೋಸ್ಟ್ ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.