Select Your Language

Notifications

webdunia
webdunia
webdunia
webdunia

ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ, ಪೊಲೀಸರಿಂದ ಚೆಕಿಂಗ್

Police checking in Karnataka

Krishnaveni K

ಬೆಂಗಳೂರು , ಗುರುವಾರ, 8 ಮೇ 2025 (10:55 IST)
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವಿರುವ ಹಿನ್ನಲೆಯಲ್ಲಿ ರಾಜ್ಯದ ಗಡಿ ಭಾಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಗಡಿಭಾಗಗಳಲ್ಲಿ ಪೊಲೀಸರು ಪ್ರತೀ ವಾಹನಗಳನ್ನು ಚೆಕಿಂಗ್ ಮಾಡುತ್ತಿದ್ದಾರೆ.
 

ನಿನ್ನೆ ತಡರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಇದಾದ ಬಳಿಕ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಹೀಗಾಗಿ ಯುದ್ಧಕ್ಕೆ ಸನ್ನದ್ಧವಾಗಿರಲು ನಿನ್ನೆ ಸಂಜೆ ದೇಶದ ವಿವಿಧ ಭಾಗಗಳಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು. ಪಾಕಿಸ್ತಾನದ ಪ್ರತೀ ದಾಳಿ ಬೆದರಿಕೆ ಹಿನ್ನಲೆಯಲ್ಲಿ ರಾಜ್ಯಗಳಿಗೂ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ಹೀಗಾಗಿ ನಿನ್ನೆಯಿಂದ ಕೇರಳ-ಕರ್ನಾಟಕ, ಕರ್ನಾಟಕ-ಮಹಾರಾಷ್ಟ್ರ, ಕರ್ನಾಟಕ-ತಮಿಳುನಾಡು ಗಡಿಭಾಗಗಳಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದರು. ಪ್ರತೀ ವಾಹನಗಳನ್ನೂ ತಪಾಸಣೆ ಮಾಡಿ ಕಳುಹಿಸಲಾಗುತ್ತಿದೆ. ಕೇಂದ್ರದ ಸೂಚನೆಯಂತೆ ನಾವು ಎಲ್ಲಾ ಭದ್ರತೆ ಕೈಗೊಳ್ಳಲಿದ್ದೇವೆ ಎಂದು ನಿನ್ನೆಯೇ ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ್ ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

Baloochistan Army blast video: ಬಲೂಚಿಸ್ತಾನ ದಾಳಿಗೆ ಛಿದ್ರ ಛಿದ್ರವಾಗಿ ಬಿತ್ತು 14 ಪಾಕಿಸ್ತಾನ ಸೈನಿಕರ ದೇಹ