ನವದೆಹಲಿ: ತನ್ನ ಮೇಲೆ ದಾಳಿ ಮಾಡಲು ಬಂದ ಪಾಕಿಸ್ತಾನವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಭಾರತದ ನೌಕಾ ಸೇನೆಯ ದೈತ್ಯ ಐಎನ್ಎಸ್ ವಿಕ್ರಾಂತ್ ಕರಾಚಿ ಬಂದರನ್ನು ಪುಡಿಗಟ್ಟಿದ ವಿಡಿಯೋ ವೈರಲ್ ಆಗಿದೆ.
1971 ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ನೌಕಾಸೇನೆಯ ವಾರ್ ಶಿಪ್ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದೆ. ಅಂದೂ ಕರಾಚಿ ಬಂದರನ್ನು ಭಾರತದ ಯುದ್ಧ ನೌಕೆ ಸಂಪೂರ್ಣ ಪುಡಿಗಟ್ಟಿತ್ತು. ಎಷ್ಟರಮಟ್ಟಿಗೆ ಎಂದರೆ ಅಂದು ಕರಾಚಿ ಬಂದರು ಬೆಂಕಿ ಆರಲು ವಾರ ಬೇಕಾಗಿತ್ತಂತೆ.
ಇಂದು ಮತ್ತೆ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದೆ. ಭಾರತದ 15 ನಗರವನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ದಾಳಿ ಮಾಡಲು ಯತ್ನಿಸಿದ್ದನ್ನು ಭಾರತದ ಎಸ್-400 ಏರ್ ಡಿಫೆನ್ಸ್ ತಡೆದು ದೇಶವನ್ನು ರಕ್ಷಿಸಿದೆ. ಇದನ್ನು ಭಾರತದ ಸುದರ್ಶನ ಚಕ್ರ ಎಂದೇ ಕರೆಯಲಾಗುತ್ತದೆ.
ಈ ಮೂಲಕ ನೀವು ಒಂದು ಹೆಜ್ಜೆ ಮುಂದಿಟ್ಟರೆ ನಾವು 10 ಹೆಜ್ಜೆ ಮುಂದಿಡಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ಕೊಟ್ಟಂತಾಗಿದೆ.