Select Your Language

Notifications

webdunia
webdunia
webdunia
webdunia

ಪತ್ನಿಯ ಶೀಲಶಂಕಿಸಿ ಆಕೆಯ ಗುಪ್ತಾಂಗವನ್ನೇ ಮುಚ್ಚಿದ ದುರುಳ ಪತಿ

ಅಪರಾಧ ಸುದ್ದಿಗಳು
ಲಕ್ನೋ , ಸೋಮವಾರ, 22 ಮಾರ್ಚ್ 2021 (09:27 IST)
ಲಕ್ನೋ: ಪತ್ನಿಯ ಶೀಲಶಂಕಿಸಿದ ಪತಿ ಆಕೆಯ ಗುಪ್ತಾಂಗವನ್ನು ಅಲ್ಯುಮಿನಿಯಂ ದಾರದಿಂದ ಹೊಲಿದು ಕ್ರೂರತನ ಮೆರೆದ ಘಟನೆ ಬರೇಲಿಯಲ್ಲಿ ನಡೆದಿದೆ.


ವೃತ್ತಿಯಲ್ಲಿ ಚಾಲಕನಾಗಿರುವ ಆರೋಪಿ ತನ್ನ 24 ವರ್ಷದ ಪತ್ನಿಯ ಕನ್ಯತ್ವ ಪರೀಕ್ಷೆ ನಡೆಸಲು ಮುಂದಾಗಿದ್ದ. ಆದರೆ ಇದಕ್ಕೆ ಆಕೆ ಒಪ್ಪದೇ ಹೋದಾಗ ಆಕೆಯ ಕೈ ಕಾಲುಗಳನ್ನು ಕಟ್ಟಿ ಹಾಕಿ ಗುಪ್ತಾಂಗಕ್ಕೆ ಹೊಲಿಗೆ ಹಾಕಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಸಂಬಂಧ ಮಹಿಳೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಗುಪ್ತಾಂಗಕ್ಕೆ ಹಾಕಲಾದ ಹೊಲಿಗೆ ಕಿತ್ತು ಹಾಕಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

100 ಕೋಟಿ ಕಪ್ಪ ವಿವಾದ: ಮಹಾ ಗೃಹಸಚಿವ ಅನಿಲ್ ರಾಜೀನಾಮೆಗೆ ಒತ್ತಾಯ