Publish Date: Thu, 18 Mar 2021 (09:49 IST)
Updated Date: Thu, 18 Mar 2021 (09:51 IST)
ಜೈಪುರ: ಅಪ್ರಾಪ್ತ ಬಾಲಕಿಗೆ ನೆರೆಮನೆಯ 70 ವರ್ಷದ ಮುದುಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ತನ್ನ ಮನೆಯ ಹೊರಗೆ ಆರೋಪಿಯ ಮೊಮ್ಮಗನೊಂದಿಗೆ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಆಕೆಯನ್ನು ಮನೆಯೊಳಗೆ ಕರೆದ ವೃದ್ಧ ಖಾಸಗಿ ಅಂಗಾಂಗಗಳನ್ನು ಸ್ಪರ್ಶಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ.
ಮನೆಗೆ ಮರಳಿದ ಬಾಲಕಿ ತನ್ನ ಪೋಷಕರ ಬಳಿ ವೃದ್ಧನ ಕೃತ್ಯ ವಿವರಿಸಿದ್ದಳು. ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವೃದ್ಧನನ್ನು ಬಂಧಿಸಲಾಗಿದೆ. ಪರಿಚಿತ ವ್ಯಕ್ತಿಯೇ ಮನೆಗೆ ಕರೆದಿದ್ದರಿಂದ ಬಾಲಕಿ ನಂಬಿ ಆತ ಕರೆದ ತಕ್ಷಣ ಮನೆಯೊಳಗೆ ಹೋಗಿದ್ದಳು ಎನ್ನಲಾಗಿದೆ.