Publish Date: Thu, 18 Mar 2021 (09:37 IST)
Updated Date: Thu, 18 Mar 2021 (09:39 IST)
ಮುಂಬೈ: ರಿಲಯನ್ಸ್ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಬನಾರಸ್ ಹಿಂದೂ ವಿವಿಗೆ ಅತಿಥಿ ಉಪನ್ಯಾಸಕರಾಗಿ ಸೇರಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬನಾರಸ್ ವಿವಿಯ ಸೋಷಿಯಲ್ ಸೈನ್ಸ್ ವಿಭಾಗ ನೀತಾ ಅಂಬಾನಿಗೆ ಅತಿಥಿ ಉಪನ್ಯಾಸಕರಾಗಿ ಸೇರಿಕೊಳ್ಳುವಂತೆ ಆಹ್ವಾನ ನೀಡಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ನೀತಾ ಅಂಬಾನಿ ಬದಲು ಸಾಧಕ ಮಹಿಳೆಯನ್ನು ಕರೆಸಿ. ನೀತಾರನ್ನು ಕರೆಸುವುದು ಕೆಟ್ಟ ನಿರ್ಧಾರ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಉದ್ಯಮಿ ಅದಾನಿ ಪತ್ನಿ ಪ್ರೀತಿ ಅದಾನಿ ಮತ್ತು ಲಕ್ಷ್ಮೀ ಮಿತ್ತಲ್ ಪತ್ನಿ ಉಷಾ ಮಿತ್ತಲ್ ರನ್ನೂ ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡುವ ಪ್ರಸ್ತಾವನೆಯೂ ವಿವಿಯ ಉನ್ನತಾಧಿಕಾರಿಗಳಿಗೆ ಇದೆ ಎನ್ನಲಾಗಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ.