Select Your Language

Notifications

webdunia
webdunia
webdunia
webdunia

100 ಕೋಟಿ ಕಪ್ಪ ವಿವಾದ: ಮಹಾ ಗೃಹಸಚಿವ ಅನಿಲ್ ರಾಜೀನಾಮೆಗೆ ಒತ್ತಾಯ

100 ಕೋಟಿ ಕಪ್ಪ ವಿವಾದ: ಮಹಾ ಗೃಹಸಚಿವ ಅನಿಲ್ ರಾಜೀನಾಮೆಗೆ ಒತ್ತಾಯ
ಮುಂಬೈ , ಸೋಮವಾರ, 22 ಮಾರ್ಚ್ 2021 (09:13 IST)
ಮುಂಬೈ: ಮಾಜಿ ಡಿಜಿಪಿ ಪರಂಬೀರ್ ಸಿಂಗ್ ಮಾಡಿದ 100 ಕೋಟಿ ರೂ. ಕಪ್ಪ ಆರೋಪದ ವಿವಾದದ ಸುಳಿಗೆ ಸಿಲುಕಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ.

 
ಮಹಾ ಗೃಹಸಚಿವರ ಮೇಲಿನ ಆರೋಪದ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಅನಿಲ್ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇನ್ನು, ಮಹಾ ಸರ್ಕಾರದ ಪಾಲುದಾರ ಪಕ್ಷವಾಗಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ಬಗ್ಗೆ ಮಾತನಾಡಿದ್ದು, ಅನಿಲ್ ಮೇಲೆ ಬಂದಿರುವ ಆರೋಪದ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ. ಹೀಗಾಗಿ ನಿರ್ಗಮಿತ ಡಿಜಿಪಿ ಮಾಡಿರುವ ಆರೋಪ ಮಹಾ ಸರ್ಕಾರವನ್ನೇ ಅಲ್ಲಾಡಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಚುನಾವಣೆ ಗೆಲ್ಲುವುದು ರಾಹುಲ್ ಗಾಂಧಿಗೆ ಮಹತ್ವ ಯಾಕೆ?