ಮುಂಬೈ: ಮದುವೆ ದಿನವೇ ವರ ತಡವಾಗಿ ಮದುವೆ ಮಂಟಪಕ್ಕೆ ಬಂದಿದ್ದಕ್ಕೆ ವಧುವಿನ ಮನೆಯವರು ಬೇರೆ ಯುವಕನೊಂದಿಗೆ ಮದುವೆ ಮಾಡಿಸಿದ ಘಟನೆ ನಡೆದಿದೆ.
ಸಂಜೆ 4 ಗಂಟೆಗೆ ಮದುವೆಗೆ ಮುಹೂರ್ತ ನಿಗದಿಯಾಗಿತ್ತು. ವಧುವಿನ ಮನೆಯವರು ಎಲ್ಲಾ ಸಿದ್ಧತೆ ಮಾಡಿಕೊಂಡು ವರನಿಗೆ ಕಾಯುತ್ತಿದ್ದರು. ಆದರೆ ಆತ ಬರಲೇ ಇಲ್ಲ. ವರ ಮತ್ತು ಆತನ ಸ್ನೇಹಿತರು ಕಂಠಪೂರ್ತಿ ಕುಡಿದು ರಾತ್ರಿ 8 ಗಂಟೆಯ ವೇಳೆಗೆ ಬಂದು ಗಲಾಟೆ ಆರಂಭಿಸಿದರು.
ಹೀಗಾಗಿ ಆತನಿಗೆ ತಮ್ಮ ಮಗಳನ್ನು ಕೊಡಲು ಇಷ್ಟಪಡದ ಪೋಷಕರು ತಮ್ಮ ಸಂಬಂಧಿಕರ ಹುಡುಗನೊಬ್ಬನೊಂದಿಗೆ ಅದೇ ಮಂಟಪದಲ್ಲಿ ಮದುವೆ ಮಾಡಿಸಿಬಿಟ್ಟರು.