Select Your Language

Notifications

webdunia
webdunia
webdunia
webdunia

ಉಕ್ರೇನ್ನ ಮತ್ತೊಂದು ನಗರ ರಷ್ಯಾ ವಶಕ್ಕೆ!

ಉಕ್ರೇನ್ನ ಮತ್ತೊಂದು ನಗರ ರಷ್ಯಾ ವಶಕ್ಕೆ!
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2022 (09:43 IST)
ಎರಡು ತಿಂಗಳಿನಿಂದ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ, ಮರಿಯುಪೋಲ್ ಬಳಿಕ ಉಕ್ರೇನ್ನ ಮತ್ತೊಂದು ನಗರವನ್ನು ವಶಕ್ಕೆ ತೆಗೆದುಕೊಂಡಿದೆ.
 
ಲುಕಾಂಕ್್ಷ ವಲಯದಲ್ಲಿರುವ ಕ್ರೆಮಿನ್ನಾ ನಗರದಲ್ಲಿ ಹಲವು ದಿನಗಳ ಕಾಳಗದ ಬಳಿಕ ವಶಕ್ಕೆ ಪಡೆಯುವಲ್ಲಿ ರಷ್ಯಾ ಸಫಲವಾಗಿದೆ ಎಂದು ಬ್ರಿಟನ್ನ ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಈ ಬಗ್ಗೆ ಉಕ್ರೇನ್ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ಮಧ್ಯೆ, ಮೂರನೇ ಮಹಾಯುದ್ಧದ ಕುರಿತು ಉಕ್ರೇನ್ ಪ್ರಚೋದನೆ ನೀಡಬಾರದು. ಜತೆಗೆ ಅಣ್ವಸ್ತ್ರ ಬಿಕ್ಕಟ್ಟಿನ ಬೆದರಿಕೆಯನ್ನು ಉಕ್ರೇನ್ ಲಘುವಾಗಿ ಪರಿಗಣಿಸಬಾರದು ಎಂದು ರಷ್ಯಾದ ರಾಯಭಾರಿ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ರೈಲು ಹಾಗೂ ಇಂಧನ ಕೇಂದ್ರಗಳ ಮೇಲೆ ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾ ನೌಕೆಗಳಿಗೆ ಡಾಲ್ಫಿನ್ ರಕ್ಷಣೆ!?