Select Your Language

Notifications

webdunia
webdunia
webdunia
webdunia

ರಷ್ಯಾ ದಾಳಿಗೆ 3 ತಿಂಗಳ ಹಸುಗೂಸು ಸಾವು: ಉಕ್ರೇನ್ ಅಧ್ಯಕ್ಷ ಕಿಡಿ

ರಷ್ಯಾ ದಾಳಿಗೆ 3 ತಿಂಗಳ ಹಸುಗೂಸು ಸಾವು: ಉಕ್ರೇನ್ ಅಧ್ಯಕ್ಷ ಕಿಡಿ
bengaluru , ಭಾನುವಾರ, 24 ಏಪ್ರಿಲ್ 2022 (16:40 IST)

ರಷ್ಯಾ ದಾಳಿಗೆ 3 ತಿಂಗಳ ಹಸುಗೂಸು ಸೇರಿದಂತೆ 8 ಮಂದಿ ನಾಗರಿಕರು ಮೃತಪಟ್ಟಿದ್ದು, ಉಕ್ರೇನ್ ಅಧ್ಯಕ್ಷ ವೊಲೊಡೈಮೈರ್ ಜೆಲೆನ್ ಸ್ಕಿ ಕಿಡಿಕಾರಿದ್ದಾರೆ.

ಉಕ್ರೇನ್ ನ ಬಂದರು ನಗರಿ ಒಡೆಸಾದಲ್ಲಿ ರಷ್ಯಾ ಸೈನಿಕರು ದಾಳಿ ನಡೆಸಿದ್ದರಿಂದ 8 ಮಂದಿ ಮೃತಪಟ್ಟಿದ್ದರು. ಇದರಲ್ಲಿ 3 ತಿಂಗಳ ಹಸುಗೂಸು ಮೃತಪಟ್ಟಿತ್ತು. 18 ಮಂದಿ ಗಾಯಗೊಂಡಿದ್ದರು.

ರಷ್ಯಾ ತನ್ನ ಸೇನೆಯನ್ನು ವಾಪಸ್ ಪಡೆದ ನಂತರ ಏಪ್ರಿಲ್ ನಲ್ಲಿ ಇದೇ ಮೊದಲ ಬಾರಿ ಕ್ಷಿಪಣಿ ದಾಳಿ ನಡೆಸಿದೆ.

ಒಡೆಸಾ ನಗರದಲ್ಲಿ ಸುಮಾರು 1 ಸಾವಿರ ಉಕ್ರೇನ್ ಸೈನಿಕರು ಸಾವಿರಾರು ನಾಗರಿಕರು ಅಡಗಿಕೊಂಡಿರುವ ಜಾಗದಲ್ಲಿ ಇದ್ದಾರೆ ಎಂದು ಹೇಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಕೊರೊನಾ ಅಲ್ಪ ಏರಿಕೆ: 2593 ಸೋಂಕು ಪ್ರಕರಣ ಪತ್ತೆ!