Select Your Language

Notifications

webdunia
webdunia
webdunia
webdunia

ನೆರವಿಗೆ ಸಹಾಯಾಸ್ತ ಚಾಚಿದ ರಷ್ಯಾ!

ನೆರವಿಗೆ ಸಹಾಯಾಸ್ತ ಚಾಚಿದ ರಷ್ಯಾ!
ಮಾಸ್ಕೋ , ಶುಕ್ರವಾರ, 22 ಏಪ್ರಿಲ್ 2022 (11:11 IST)
ಮಾಸ್ಕೋ : ಉಕ್ರೇನ್ ಮೇಲಿನ ಆಕ್ರಮಣದ ನಂತರ ನಾನಾ ರೀತಿಯ ನಿರ್ಬಂಧಕ್ಕೆ ಒಳಗಾಗಿ ವಿದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಕಡಿತಕ್ಕೊಳಗಾಗಿರುವ ರಷ್ಯಾ, ಇದೀಗ ಅಗತ್ಯ ವೈದ್ಯಕೀಯ ಉಪಕರಣ ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿದೆ.

ಈ ಹಿನ್ನೆಲೆಯಲ್ಲಿ ರಷ್ಯಾಕ್ಕೆ ಬೇಕಾದ ವೈದ್ಯಕೀಯ ಉಪಕರಣಗಳು ಮತ್ತು ಅವುಗಳ ಪೂರೈಕೆ ವಿಧಿವಿಧಾನ ಕುರಿತು ಚರ್ಚಿಸಲು ಭಾರತ ಹಾಗೂ ರಷ್ಯಾದ ವೈದ್ಯಕೀಯ ಉತ್ಪನ್ನಗಳ ಕಂಪನಿಗಳು ಏ.22ರಂದು ವರ್ಚುವಲ್ ಆಗಿ ಸಭೆ ನಡೆಸಲಿವೆ.

ಇದರಲ್ಲಿ ವ್ಯಾಪಾರ ವೃದ್ಧಿಸುವ ಮಾರ್ಗಗಳ ಮಾತುಕತೆ ನಡೆಯಲಿದೆ ಎಂದು ಭಾರತೀಯ ವೈದ್ಯಕೀಯ ಉತ್ಪನ್ನಗಳ ಉದ್ಯಮ ಸಂಘದ ಸಂಯೋಜಕರಾದ ರಾಜೀವ್ ನಾಥ್ ಹೇಳಿದ್ದಾರೆ. ಇದಕ್ಕೆ ರಷ್ಯಾ ವ್ಯಾಪಾರ ಸಮೂಹವಾದ ಬ್ಯುಸಿನೆಸ್ ರಷ್ಯಾ ಒಪ್ಪಿಗೆ ಸೂಚಿಸಿದೆ ಎಂದೂ ಅವರು ಹೇಳಿದ್ದಾರೆ.

ವ್ಯಾಪಕವಾದ ಆರ್ಥಿಕ ನಿರ್ಬಂಧಗಳನ್ನು ಮಾಸ್ಕೋ ಎದುರಿಸುತ್ತಿದೆ. ಹಾಗಾಗಿ ಶೀತಲ ಸಮರದ ಸಮಯದಲ್ಲಿ ಬಳಸಿದಂತೆಯೇ ಸ್ಥಳೀಯ ಕರೆನ್ಸಿಗಳ ಪಾವತಿ ವ್ಯವಸ್ಥೆಯ ಮೂಲಕ ರಷ್ಯಾಗೆ ರಫ್ತನ್ನು ಹೆಚ್ಚು ಮಾಡಲು ಭಾರತ ಆಶಿಸುತ್ತಿದೆ.

ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿದ ನಂತರ ರಷ್ಯಾದಿಂದ ಹೆಚ್ಚಿನ ತೈಲ ಖರೀದಿಸುವ ಭಾರತದ ನಿರ್ಧಾರಕ್ಕೆ ಪಾಶ್ಚಿಮಾತ್ಯ ದೇಶಗಳು ವಿರೋಧ ವ್ಯಕ್ತಪಡಿಸಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಫೋನ್ನಲ್ಲೇ ಮುಳುಗಿರುತ್ತಿದ್ದ ಪತ್ನಿ, ಶಂಕಿಸಿ ಕೊಲೆ ಮಾಡಿದ ಪತಿ!