Select Your Language

Notifications

webdunia
webdunia
webdunia
webdunia

ದೇಶದಲ್ಲಿ ಕೊರೊನಾ ಅಲ್ಪ ಏರಿಕೆ: 2593 ಸೋಂಕು ಪ್ರಕರಣ ಪತ್ತೆ!

ದೇಶದಲ್ಲಿ ಕೊರೊನಾ ಅಲ್ಪ ಏರಿಕೆ: 2593 ಸೋಂಕು ಪ್ರಕರಣ ಪತ್ತೆ!
bengaluru , ಭಾನುವಾರ, 24 ಏಪ್ರಿಲ್ 2022 (16:35 IST)

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2593 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಕಳೆದ ಒಂದು ವಾರದಲ್ಲಿ ಸೋಂಕು ಪ್ರಮಾಣದಲ್ಲಿ ಅಲ್ಪ ಏರಿಕೆ ಕಂಡು ಬರುತ್ತಿದೆ.

ಕೇಂದ್ರ ಸರಕಾರ ಭಾನುವಾರ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 5 ದಿನಗಳಿಂದ ಸತತವಾಗಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ದೆಹಲಿಯಲ್ಲಿ 1 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಒಂದು ದಿನದಲ್ಲಿ 54 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 5,22,193ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,873ಕ್ಕೆ ಜಿಗಿತ ಕಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡವೆಂದ ಬಿಎಸ್‌ವೈ?