Publish Date: Thu, 28 Apr 2022 (11:46 IST)
Updated Date: Thu, 28 Apr 2022 (09:49 IST)
ರಾಯಚೂರು: ಗೆಳೆಯನ ಪತ್ನಿ ಮೇಲೆ ಕಾಮದ ಕಣ್ಣು ಹಾಕಿದ್ದ ವ್ಯಕ್ತಿ ಕೊಲೆಗೀಡಾದ ಘಟನೆ ಇಲ್ಲಿ ನಡೆದಿದೆ.
ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಕ್ಕೆ ಗೆಳೆಯ ಬುದ್ಧಿ ಹೇಳಿದ್ದ. ಸಂಬಂಧ ಬಿಡುವಂತೆ ಹೇಳಿದ್ದ. ಆದರೂ ಆತ ಚಾಳಿ ಬಿಟ್ಟಿರಲಿಲ್ಲ.
ಹೀಗಾಗಿ ಪಾರ್ಟಿ ಮಾಡೋಣವೆಂದು ಉಪಾಯವಾಗಿ ಆತನನ್ನು ಕರೆದೊಯ್ದ ಗೆಳೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇದಕ್ಕೆ ಆರೋಪಿಗೆ ಆತನ ಅಣ್ಣನೂ ಸಾಥ್ ನೀಡಿದ್ದಾನೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.