Publish Date: Fri, 29 Apr 2022 (09:40 IST)
Updated Date: Fri, 29 Apr 2022 (09:41 IST)
ಮುಂಬೈ: ಎಂಟು ತಿಂಗಳ ತುಂಬು ಗರ್ಭಿಣಿಯನ್ನು 22 ವರ್ಷದ ಯುವಕನೊಬ್ಬ ಕತ್ತು ಹಿಸುಕಿ ಕೊಲೆ ಮಾಡಿದ್ದು ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಮಹಿಳೆಯ ಪತಿಯ ಸೋದರ ಸಂಬಂಧಿಯಾಗಿದ್ದು, ಇವರ ಜೊತೆಗೇ ಕೆಲವು ದಿನಗಳಿಂದ ವಾಸವಾಗಿದ್ದ. ಆದರೆ ಈಗ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ್ದರಿಂದ ಮಗುವೂ ಸಾವನ್ನಪ್ಪಿದೆ.
ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತಾಯಿಯ ಜೊತೆಗೆ ಮಗುವನ್ನೂ ಕೊಲೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.