Publish Date: Fri, 19 Mar 2021 (09:20 IST)
Updated Date: Fri, 19 Mar 2021 (09:25 IST)
ಗುರುಗ್ರಾಮ : ಅಂಬೆಗಾಲಿಡುತ್ತಿದ್ದ 13 ತಿಂಗಳ ಮಗುವೊದು ನಿರಂತರವಾಗಿ ಅಳುತ್ತಿದ್ದ ಕಾರಣದಿಂದ ಅದನ್ನು ನೋಡಿಕೊಳ್ಳುತ್ತಿದ್ದ 15 ವರ್ಷದ ಹುಡುಗಿ ಮಗುವಿನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ಘಟನೆ ಹರಿಯಾಣದ ಗುರುಗ್ರಾಮ್ ನಲ್ಲಿ ನಡೆದಿದೆ.
ಮಗುವಿನ ತಂದೆ ತಾಯಿ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಹುಡುಗಿಗೆ ಮಗುವನ್ನು ನೋಡಿಕೊಳ್ಳುವ ಕೆಲಸ ವಹಿಸಲಾಗಿತ್ತು. ಆದರೆ ಆಕೆ ಮಗುವಿಗೆ ಹೊಡೆದ ಕಾರಣ ಮಗು ಅಳಲು ಶುರುಮಾಡಿದೆ. ಇದರಿಂದ ಕಿರಿಕಿರಿಗೊಂಡ ಹುಡುಗಿ ಮಗುವನ್ನು ಕ್ರೂರವಾಗಿ ಥಳಿಸಿದ್ದಾಳೆ.
ಮನೆಗೆ ಬಂದ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಾಗ ಮಗುವಿಗೆ ಗಂಭೀರ ಗಾಯವಾಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಹುಡುಗಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.