Publish Date: Sun, 14 Mar 2021 (09:16 IST)
Updated Date: Sun, 14 Mar 2021 (09:17 IST)
ಬೆಂಗಳೂರು: ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಕುಟುಂಬಸ್ಥರೇ ಆಕೆಯನ್ನು ಹತ್ಯೆ ಮಾಡಿದ ಘಟನೆ ರಾಮನಗರದಲ್ಲಿ ನಡೆದಿದೆ.
ಎರಡು ವರ್ಷದ ವಿಶೇಷ ಚೇತನ ಹೆಣ್ಣು ಮಗುವನ್ನು ಕುಟುಂಬಸ್ಥರೇ ಹತ್ಯೆ ಮಾಡಿದ್ದಾರೆ. ಸಮೀಪದ ಬಾವಿಯಲ್ಲಿ ಮಗುವಿನ ಮೃತದೇಹ ನೋಡಿದ ನೆರೆಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ತಂದೆ-ತಾಯಿ ಕೆಲಸ ಮಾಡುತ್ತಿದ್ದರು. ಆದರೆ ಆ ಹಣ ಮಗುವಿನ ಚಿಕಿತ್ಸೆಗೆ ಸಾಕಾಗುತ್ತಿರಲಿಲ್ಲ. ಮಾರ್ಚ್ 8 ರಂದು ಮಗುವನ್ನು ಬಾವಿಗೆಸೆದು ಹತ್ಯೆ ಮಾಡಿದ ಅಜ್ಜಿ ಮತ್ತು ಮುತ್ತಜ್ಜಿ ಬರಿಗೈಯಲ್ಲಿ ವಾಪಸಾಗುತ್ತಿದ್ದುದನ್ನು ಊರಿನವರು ನೋಡಿದ್ದಾರೆ.
ಈ ಬಗ್ಗೆ ಅಜ್ಜಿಯಂದಿರನ್ನು ವಿಚಾರಣೆ ನಡೆಸಿದಾಗ ಅಜ್ಜಿಯಂದಿರು ತಪ್ಪೊಪ್ಪಿಕೊಂಡಿದ್ದಾರೆ. ಈ ವಿಚಾರ ಪೋಷಕರಿಗೂ ತಿಳಿದಿತ್ತು. ಅದಕ್ಕಾಗಿ ಅಂದು ಅವರು ಬೇಗನೇ ಫ್ಯಾಕ್ಟರಿಗೆ ತೆರಳಿದ್ದರು ಎಂದು ಬಾಯ್ಬಿಟ್ಟಿದ್ದಾರೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.