Select Your Language

Notifications

webdunia
webdunia
webdunia
webdunia

ಅತ್ತೆ, ಪತ್ನಿಯ ಕಿರುಕುಳದಿಂದ ಬೇಸತ್ತು ವ್ಯಕ್ತಿ ನೇಣಿಗೆ ಶರಣು

ಅತ್ತೆ, ಪತ್ನಿಯ ಕಿರುಕುಳದಿಂದ ಬೇಸತ್ತು ವ್ಯಕ್ತಿ ನೇಣಿಗೆ ಶರಣು
ಅಹಮ್ಮದಾಬಾದ್ , ಗುರುವಾರ, 11 ಮಾರ್ಚ್ 2021 (09:44 IST)
ಅಹಮ್ಮದಾಬಾದ್: ಅತ್ತೆ ಮನೆಯವರು ಮತ್ತು ಪತ್ನಿಯ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ಗುಜರಾತ್ ನಲ್ಲಿ ನಡೆದಿದೆ.


ಸಾವಿಗೆ ಮುನ್ನ ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ಇದರಲ್ಲಿ ತನ್ನ ಅತ್ತೆ ಮನೆಯವರಿಂದ ಮತ್ತು ಪತ್ನಿಯಿಂದ ಆಗುತ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾನೆ. ಇದೇ ಕಾರಣಕ್ಕೆ ಜೀವನ ಕೊನೆಗಾಣಿಸುತ್ತಿರುವುದಾಗಿ ಹೇಳಿದ್ದಾನೆ.

ಎಲ್ಎಲ್ ಬಿ ಪದವೀರರಾದ ಮೃತ  ವ್ಯಕ್ತಿ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. 8 ವರ್ಷಗಳ ಹಿಂದೆ ಮದುವೆಯೂ ಆಗಿತ್ತು.  ಇವರಿಗೆ 11 ತಿಂಗಳ ಮಗುವಿದೆ. ಆದರೆ ಹೆರಿಗೆ ಬಳಿಕ ಪತ್ನಿ ಗಂಡನ ಮನೆಗೆ ಬರಲಿಲ್ಲ. ಇದಕ್ಕೆ ಇಬ್ಬರ ನಡುವಿನ ವೈಮನಸ್ಯವೇ ಕಾರಣವಾಗಿತ್ತು ಎನ್ನಲಾಗಿದೆ.

ಇದೀಗ ಮೃತ ಮಾಡಿದ ಆರೋಪದ ಸತ್ಯಾಸತ್ಯತೆ ತಿಳಿಯಲು ಪೊಲೀಸರು ಆತನ ಮೊಬೈಲ್ ನ್ನು ಪರೀಕ್ಷೆಗೊಳಪಡಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನೊಂದಿಗೆ ವಿವಾಹವಾಗಲು 3 ವರ್ಷದ ಮಗುವನ್ನು ಅಪಹರಿಸಿದ ಯುವತಿ