Select Your Language

Notifications

webdunia
webdunia
webdunia
webdunia

ಮಗನ ಶಾಲೆ ಫೀ ಕಟ್ಟಲು ಹೇಳಿದ್ದಕ್ಕೆ ಹೆಂಡತಿಗೆ ಇದೆಂಥಾ ಗತಿ ತಂದ ಪತಿ

ಅಪರಾಧ ಸುದ್ದಿಗಳು
ಬೆಂಗಳೂರು , ಸೋಮವಾರ, 8 ಮಾರ್ಚ್ 2021 (09:31 IST)
ಬೆಂಗಳೂರು: ಮಗನ ಶಾಲೆ ಶುಲ್ಕ ಪಾವತಿ ಮಾಡಿ ಎಂದಿದ್ದಕ್ಕೆ ಪತ್ನಿಯ ಮೇಲೆ ಪತಿರಾಯ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಮೂರನೇ ತರಗತಿ ಓದುತ್ತಿದ್ದ ಮಗನ ಶಾಲೆ ಫೀ ಕಟ್ಟದೇ ಹೋದರೆ ಆತನಿಗೆ ಆನ್ ಲೈನ್ ಕ್ಲಾಸ್ ಗೆ ಅನುವು ಮಾಡುವುದಿಲ್ಲವೆಂದು ಶಾಲೆಯಿಂದ ಹೇಳಿದ್ದರು. ಅದರಂತೆ ಶುಲ್ಕ ಪಾವತಿಸಲು ಪತಿಗೆ ಹೇಳಿದ್ದಕ್ಕೆ ಆತ ಸಿಟ್ಟಿನಿಂದ ಕೈಗೆ ಸಿಕ್ಕ ವಸ್ತುಗಳಿಂದ ಜ್ಞಾನ ತಪ್ಪುವಂತೆ ಹಲ್ಲೆ ಮಾಡಿದ್ದಾನೆ. ಕೊನೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

12 ವರ್ಷಗಳ ಹಿಂದೆ ಈ ದಂಪತಿ ಪ್ರೇಮಿಸಿ ಮದುವೆಯಾಗಿದ್ದರು. ಇದೀಗ ಇಬ್ಬರು ಮಕ್ಕಳಿದ್ದಾರೆ. ಆದರೆ ಪ್ರೀತಿಸಿ ಮದುವೆಯಾದ ತಪ್ಪಿಗೆ ಮಹಿಳೆಯ ತವರು ಮನೆಯವರು ಆಕೆಯೊಂದಿಗೆ ಸಂಪರ್ಕವಿಟ್ಟುಕೊಂಡಿಲ್ಲ. ಕಳೆದ ಒಂದು ವರ್ಷದಿಂದ ನನ್ನ ಎಲ್ಲಾ ಹಣಕಾಸಿನ ಕಷ್ಟಗಳಿಗೂ ನೀನೇ ಕಾರಣ ಎಂದು ಪದೇ ಪದೇ ಗಂಡ ಹಲ್ಲೆ ನಡೆಸುತ್ತಾನೆ ಎಂದು ಮಹಿಳೆ ಬಾಯ್ಬಿಟ್ಟಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಮತೂಕದ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ