Publish Date: Fri, 05 Mar 2021 (09:33 IST)
Updated Date: Fri, 05 Mar 2021 (09:35 IST)
ಮೀರತ್: ಬೊಕ್ಕ ತಲೆ ಮುಚ್ಚಿಟ್ಟು ಮದುವೆಯಾದ ತಪ್ಪಿಗೆ ಪತಿ ಮಹಾಶಯನ ಮೇಲೆ ಪತ್ನಿ ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆಯಾಗುವಾಗ ಗಂಡ ಈ ವಿಚಾರ ಮುಚ್ಚಿಟ್ಟಿದ್ದ. ಮದುವೆ ಸಮಯದಲ್ಲಿ ವಿಗ್ ಧರಿಸಿದ್ದ. ಒಂದು ವರ್ಷದ ಬಳಿಕ ತನ್ನ ಗಂಡನ ಕೂದಲಿನ ರಹಸ್ಯ ಬಯಲಿಗೆ ಬಂತು. ಇದರಿಂದಾಗಿ ತನ್ನ ಗೆಳೆಯರ ಮುಂದೆ ತನಗೆ ಅವಮಾನವಾಗುತ್ತಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಅಷ್ಟೇ ಅಲ್ಲ, ಪತಿ ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದೂ ಆಪಾದಿಸಿದ್ದಾಳೆ. ಹೀಗಾಗಿ ಈ ಪ್ರಕರಣ ಪತಿ ಪಾಲಿಗೆ ಮತ್ತಷ್ಟು ಉರುಳಾಗಿದೆ. ಪತ್ನಿಯ ಅಳಲು ಕೇಳಿದ ಮೇಲೆ ನ್ಯಾಯಾಧೀಶರು ಇದೀಗ ಎರಡನೇ ಬಾರಿ ಕೌನ್ಸೆಲಿಂಗ್ ಗೆ ನ್ಯಾಯಾಧೀಶರು ದಿನ ನಿಗದಿಪಡಿಸಿದ್ದಾರೆ.