Publish Date: Tue, 02 Mar 2021 (09:36 IST)
Updated Date: Tue, 02 Mar 2021 (09:38 IST)
ಚೆನ್ನೈ: ಪ್ರಿಯಕರನ ಸಾವಿನ ಹತಾಶೆಯಲ್ಲಿ ಪ್ರೇಯಸಿ ಉಪವಾಸ ಬಿದ್ದು, ಕೊನೆಗೆ ಬೆಂಕಿಗೆ ಆಹುತಿಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಈಕೆಯ ಪ್ರೇಮ ಸಂಬಂಧ ಮನೆಯವರಿಗೆ ಇಷ್ಟವಿರಲಿಲ್ಲ. ಈ ವಿಚಾರವಾಗಿ ಪೋಷಕರಿಂದ ಪ್ರತಿರೋಧ ವ್ಯಕ್ತವಾಗುತ್ತಲೇ ಇತ್ತು. ಇದರಿಂದ ಮನನೊಂದ ಪ್ರಿಯಕರ ಸ್ವಯಂ ಹತ್ಯೆ ಮಾಡಿಕೊಂಡಿದ್ದ. ಇದೇ ಬೇಸರದಲ್ಲಿ ಯುವತಿಯೂ ಉಪವಾಸವಿದ್ದು, ಕೆಲವು ದಿನಗಳ ಬಳಿಕ ಬೆಂಕಿಗೆ ಆಹುತಿಯಾಗಿ ಜೀವಕೊನೆಗಾಣಿಸಿದ್ದಾಳೆ.