Publish Date: Sun, 07 Mar 2021 (09:23 IST)
Updated Date: Sun, 07 Mar 2021 (09:24 IST)
ನವದೆಹಲಿ: ಕರ್ತವ್ಯಕ್ಕೆ ತೆರಳುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ದುರುಳನೊಬ್ಬ ಲೈಂಗಿಕ ಕಿರುಕುಳ ನಡೆಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಪೊಲೀಸ್ ಕಂಟ್ರೋಲ್ ರೂಂನ ಸಿಬ್ಬಂದಿಯಾಗಿರುವ ಮಹಿಳೆ ಸಿಟಿ ಬಸ್ ನಲ್ಲಿ ತೆರಳುತ್ತಿದ್ದಾಗ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ ಅಲ್ಲದೆ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ವಿಪರ್ಯಾಸವೆಂದರೆ ಜೊತೆಗಿದ್ದವರು ಮೂಕ ಪ್ರೇಕ್ಷಕರಾಗಿದ್ದರಷ್ಟೇ ಹೊರತು ಮಹಿಳೆಗೆ ಯಾರೂ ಸಹಾಯ ಮಾಡಲಿಲ್ಲ.
ಮಹಿಳಾ ಅಧಿಕಾರಿ ಪೊಲೀಸರನ್ನು ಕರೆಯುವುದಾಗಿ ಬೆದರಿಸಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಆತನ ವಿರುದ್ಧ ಸಂತ್ರಸ್ತ ಅಧಿಕಾರಿ ದೂರು ನೀಡಿದ್ದು, ಆರೋಪಿಗಾಗಿ ಹುಡುಕಾಟ ನಡೆದಿದೆ.