Publish Date: Mon, 08 Mar 2021 (09:25 IST)
Updated Date: Mon, 08 Mar 2021 (09:26 IST)
ಬೆಂಗಳೂರು: ಕೊರೋನಾ ಸಂಕಷ್ಟ ಕಾಲದ ಬಳಿಕ ರಾಜ್ಯ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ. ಇಂದು ಸಮತೋಲಿತ ಬಜೆಟ್ ಮಂಡನೆಯ ಸಾಧ್ಯತೆ ಹೆಚ್ಚಿದೆ.
ಕೊರೋನಾ, ಪ್ರವಾಹ, ಬರ ಇತ್ಯಾದಿಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಬಜೆಟ್ ಮಂಡಿಸುವುದು ಸಿಎಂಗೆ ಸವಾಲಿನ ಕೆಲಸವಾಗಲಿದೆ. ಈ ಬಜೆಟ್ ನಲ್ಲಿ ಆರೋಗ್ಯ, ಕೃಷಿ ಕ್ಷೇತ್ರ, ಪ್ರತೀ ತಾಲೂಕಿನಲ್ಲಿ ಗೋ ಶಾಲೆಗಳ ಸ್ಥಾಪನೆ, ಸಣ್ಣ ನೀರಾವರಿ ಯೋಜನೆಗಳಿಗೆ ಒತ್ತು ನೀಡುವುದು ಸೇರಿದಂತೆ ಸಂಕಷ್ಟಕ್ಕೀಡಾಗಿರುವ ಉದ್ಯಮಗಳನ್ನು ಮೇಲೆತ್ತಲು ಯೋಜನೆ ಪ್ರಕಟಿಸುವ ಸಾಧ‍್ಯತೆಯಿದೆ.
ಈಗಾಗಲೇ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವುದರಿಂದ ಬಾಹ್ಯ ಮೂಲಗಳಿಂದ ಸಾಲ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊರೋನಾದಿಂದಾಗಿ ಸಂಪನ್ಮೂಲ ಕ್ರೋಡೀಕರಣ ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ. ಹೊಸ ಯೋಜನೆಗಳಿಗಿಂತ ಹಳೇ ಯೋಜನೆಗಳನ್ನು ಮುಂದುವರಿಸಲು ಸರ್ಕಾರ ಹೆಚ್ಚಿನ ಒತ್ತು ನೀಡಬಹುದು.