Select Your Language

Notifications

webdunia
webdunia
webdunia
webdunia

ಸುಲಲಿತ ಜೀವನಕ್ಕೆ ಬೆಂಗಳೂರು ದೇಶಕ್ಕೇ ನಂ.1

ಸುಲಲಿತ ಜೀವನಕ್ಕೆ ಬೆಂಗಳೂರು ದೇಶಕ್ಕೇ ನಂ.1
ಬೆಂಗಳೂರು , ಶುಕ್ರವಾರ, 5 ಮಾರ್ಚ್ 2021 (09:56 IST)
ಬೆಂಗಳೂರು: ಕೇಂದ್ರ ನಗರಾಭಿವೃದ್ಧಿ ಬಿಡುಗಡೆ ಮಾಡಿರುವ ಸುಲಲಿತ ಜೀವನಕ್ಕೆ ಹೇಳಿ ಮಾಡಿಸಿದ ನಗರಗಳ ಪಟ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ದೇಶಕ್ಕೇ ನಂ.1 ಆಗಿದೆ.


ಸುಲಲಿತ ಜೀವನ ಸೂಚ್ಯಂಕದ ಆಧಾರದಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಅತ್ಯಂತ ಸೌಕರ್ಯದಾಯಕ ನಗರ ಎಂದು ಬಿರುದು ನೀಡಿದೆ. 10 ಲಕ್ಷಕ್ಕಿಂತ ಹೆಚ್ಚು ಜನರಿರುವ ನಗರಗಳ ಪೈಕಿ ಬೆಂಗಳೂರು ನಂ.1 ಆಗಿದೆ.

ಇನ್ನು ಕರ್ನಾಟಕದ ಇನ್ನೊಂದು ನಗರ ಹುಬ್ಬಳ್ಳಿ-ಧಾರವಾಡಕ್ಕೆ ಪಟ್ಟಿಯಲ್ಲಿ 37 ನೇ ಸ್ಥಾನ ಪಡೆದಿದೆ. 10 ಲಕ್ಷಕ್ಕಿಂತ ಕಡಿಮೆ ಜನರಿರುವ ನಗರಗಳ ಪಟ್ಟಿಯಲ್ಲಿ ದಾವಣೆಗೆರೆಗೆ 9 ನೇ ಸ್ಥಾನ ಸಿಕ್ಕಿದೆ. ಈ ಪಟ್ಟಿಯಲ್ಲಿ ಶಿಮ್ಲಾಗೆ ಮೊದಲನೇ ಸ್ಥಾನ.

ಈ ನಗರಗಳ 15 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಂಕ ನೀಡಲಾಗಿದೆ. ವಿಪರ್ಯಾಸವೆಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮಹಾನಗರಗಳ ಪಾಲಿಕೆಗಳ ಪಟ್ಟಿಯಲ್ಲಿ 31 ನೇ ಸ್ಥಾನ ಪಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೊಕ್ಕ ತಲೆ ಮುಚ್ಚಿಟ್ಟಿದ್ದಕ್ಕೆ ಪತಿಯಿಂದ ವಿಚ್ಛೇದನ ಬಯಸಿದ ಪತ್ನಿ!