ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಬಗ್ಗೆ ದೂರು ನೀಡಿದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ‍್ಯಕ್ಷ ದಿನೇಶ್ ಕಲ್ಲಳ್ಳಿ ಪ್ರಧಾನಿ ಮೋದಿ ಭೇಟಿಗೂ ಪ್ರಯತ್ನಿಸುವೆ ಎಂದಿದ್ದಾರೆ.
ಪ್ರಕರಣ ಸಂಬಂಧ ಪ್ರಧಾನಿ ಮೋದಿಯವರನ್ನೂ ಭೇಟಿಯಾಗಿ ಇದನ್ನು ಹೇಳಲು ಪ್ರಯತ್ನಿಸುವೆ. ಸುಬ್ರಹ್ಮಣ್ಯ ಸ್ವಾಮಿ ಮೂಲಕ ಪ್ರಧಾನಿ ಭೇಟಿ ಮಾಡಲು ಪ್ರಯತ್ನಿಸುವೆ ಎಂದಿದ್ದಾರೆ.
ಒಬ್ಬ ಮಾರ್ಗದರ್ಶಕರ ಸ್ಥಾನದಲ್ಲಿರುವ ರಮೇಶ್ ಜಾರಕಿಹೊಳಿ ಈ ರೀತಿ ಮಾಡಿರುವುದು ತಪ್ಪು. ಒಂದು ವೇಳೆ ಒಪ್ಪಿಗೆಯೊಂದಿಗೆ ಸಂಬಂಧ ನಡೆಸಿದ್ದರೂ ತಪ್ಪು ಎಂದು ಅವರು ಹೇಳಿದ್ದಾರೆ.
ನಾನು ಸಂತ್ರಸ್ತ ಯುವತಿ ಕುಟುಂಬದ ಜೊತೆ ಮಾತನಾಡಿದ್ದೇನೆ. ನನ್ನ ಕೆಲಸವನ್ನು ಅವರೂ ಗಮನಸಿದ್ದಾರೆ. ಅವರ ಪರವಾಗಿ ನಾನು ಹೋರಾಟ ನಡೆಸುತ್ತಿದ್ದೇನೆ ಎಂದು ದಿನೇಶ್ ಕಲ್ಲಳ್ಳಿ ಹೇಳಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!