Publish Date: Wed, 03 Mar 2021 (10:29 IST)
Updated Date: Wed, 03 Mar 2021 (10:33 IST)
ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ಬಗ್ಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ತೀವ್ರ ಒತ್ತಾಯ ಮಾಡುತ್ತಿವೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹೋದರ ಬಾಲಚಂದ್ರ ಜಾರಕಿಹೊಳಿ ಇದೆಲ್ಲಾ ನಕಲಿ ವಿಡಿಯೋ ಎಂದಿದ್ದಾರೆ.
ಯಾರೋ ಬೇಕೆಂದೇ ಹೆಸರು ಕೆಡಿಸಲು ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಸಿಒಡಿ ಅಥವಾ ಸಿಬಿಐ ತನಿಖೆ ನಡೆಯಬೇಕು. ಆಗ ಸತ್ಯ ಬಹಿರಂಗವಾಗುತ್ತದೆ. ಆಗ ವಿಡಿಯೋ ನೈಜವೋ, ಸೃಷ್ಟಿ ಮಾಡಿದ್ದೋ ಗೊತ್ತಾಗುತ್ತದೆ. ಸಿಡಿ ಬಿಡುಗಡೆ ಮಾಡಿದವರ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ಮಾಡುತ್ತಿದ್ದೇವೆ. ಈ ವಿಡಿಯೋ ವಿದೇಶದಲ್ಲೂ ಬಿಡುಗಡೆಯಾಗಿದೆ. ಹೀಗಾಗಿ ಇದರ ಸತ್ಯಾಸತ್ಯತೆ ಬಯಲಿಗೆ ಬರಬೇಕು. ಸಂತ್ರಸ್ತ ಮಹಿಳೆಯೇ ದೂರು ಕೊಟ್ಟಿಲ್ಲ. ಒಂದು ವೇಳೆ ಆಕೆಯೇ ಬಂದು ದೂರು ಕೊಟ್ಟರೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಬಹುದು. ಯಾರೋ ಒಬ್ಬರು ಬಂದು ದೂರು ಕೊಟ್ಟರು ಎಂಬ ಮಾತ್ರಕ್ಕೆ ರಾಜೀನಾಮೆ ಕೊಡಲು ಸಾಧ‍್ಯವಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.