Publish Date: Sat, 27 Feb 2021 (10:16 IST)
Updated Date: Sat, 27 Feb 2021 (10:18 IST)
ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಕಾರಿಗೆ ತಾವೇ ಪಂಕ್ಚರ್ ಹಾಕುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾದಾ ಉಡುಪಿನಲ್ಲಿರುವ ರೋಹಿಣಿ ನೆಲದಲ್ಲಿ ಕುಳಿತು ಟೈರ್ ಕಳಚಲು ಜ್ಯಾಕ್ ಹಾಕುತ್ತಿದ್ದಾರೆ. ಇದನ್ನು ಗಮನಿಸಿ ಅಲ್ಲಿದ್ದವರು ಮೇಡಂ ನೀವು ರೋಹಿಣಿ ಸಿಂಧೂರಿ ಅವರಲ್ವಾ? ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸದ ಅವರು ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಮತ್ತೆ ಆ ವ್ಯಕ್ತಿ ಅದೇ ಪ್ರಶ್ನೆ ಮಾಡಿದಾಗ ಆ ವ್ಯಕ್ತಿಯತ್ತ ನೋಡಿ ನಕ್ಕು ತಮ್ಮ ಕೆಲಸದಲ್ಲಿ ಮುಂದುವರಿಯುತ್ತಾರೆ. ಡಿಸಿ ಮೇಡಂರ ಈ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.