Publish Date: Sat, 27 Feb 2021 (09:50 IST)
Updated Date: Sat, 27 Feb 2021 (09:51 IST)
ಹೈದರಾಬಾದ್: ಅನಾರೋಗ್ಯ ಪೀಡಿತ ಮಗಳನ್ನು ಉಳಿಸಲು ಹೆತ್ತವರು ಕಿರಿಯ ಮಗಳನ್ನೇ ಮಾರಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
16 ವರ್ಷದ ಪುತ್ರಿ ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದಳು. ಅವಳ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ದಂಪತಿ 46 ವರ್ಷದ ವ್ಯಕ್ತಿಗೆ 12 ವರ್ಷದ ಕಿರಿಯ ಪುತ್ರಿಯನ್ನು ಕೇವಲ 10 ಸಾವಿರ ರೂ.ಗಳಿಗೆ ಮಾರಿದ್ದಾರೆ. ಈ ವಿಷಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ತಿಳಿದುಬಂದು, ಬಾಲಕಿಯನ್ನು ರಕ್ಷಿಸಿದ್ದಾರೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.