Publish Date: Wed, 24 Feb 2021 (09:51 IST)
Updated Date: Wed, 24 Feb 2021 (09:53 IST)
ಕೋಲ್ಕೊತ್ತಾ: ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಅನುಮಾನದಲ್ಲಿ ಅಮ್ಮ ಮತ್ತು ಆಕೆಯ ಹದಿಹರೆಯದ ಮಗಳನ್ನು ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿಸಿ, ತಲೆಕೂದಲು ಕತ್ತರಿಸಿ ಹಲ್ಲೆ ನಡೆಸಿದ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ.
ಕಬಡ್ಡಿ ಆಟಗಾರ್ತಿಯಾಗಿರುವ ಮಹಿಳೆಯ ತಾಯಿ ತನ್ನ ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಅನುಮಾನದಲ್ಲಿ ಆರೋಪಿ ಮಹಿಳೆ ಹಾಗೂ ಆಕೆಯ ಸಂಗಡಿಗರು ಸೇರಿಕೊಂಡು ಈ ಈ ಕೆಲಸ ಮಾಡಿ ವಿಡಿಯೋ ಹರಿಯಬಿಟ್ಟಿದ್ದಾರೆ. ಇದೀಗ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆದಿದೆ.