Publish Date: Fri, 12 Mar 2021 (10:14 IST)
Updated Date: Fri, 12 Mar 2021 (10:16 IST)
ಬೆಂಗಳೂರು: ತಂದೆ ಮೇಲಿನ ಮಗನ ಬರ್ಬರವಾಗಿ ಹತ್ಯೆ ಮಾಡಿದ ಹೇಯ ಕೃತ್ಯ ಸಿದ್ಧಾಪುರದಲ್ಲಿ ನಡೆದಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಹೊಂಬೇಗೌಡ ನಿವಾಸಿ 20 ವರ್ಷದ ಆಕಾಶ್ ಹತ್ಯೆಗೀಡಾದವ. ರಾತ್ರಿ ಸುಮಾರು 9 ಗಂಟೆ ವೇಳೆಗೆ ಶೌಚಕ್ಕೆ ಹೊರಗೆ ಬಂದಿದ್ದ ಯುವಕ ಆಕಾಶ್ ನನ್ನು ಐದಾರು ಮಂದಿ ಮಾರಕಾಸ್ತ್ರಗಳಿಂದ ಬೆದರಿಸಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಆಗ ಆಕಾಶ್ ತಂದೆ ಮನೆಯಲ್ಲಿಲ್ಲ ಎಂದಿದ್ದಾನೆ. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕಾಶ್ ಆಸ್ಪತ್ರೆಗೆ ಸಾಗಿಸುವ ಮಧ‍್ಯದಲ್ಲಿ ಮೃತಪಟ್ಟಿದ್ದಾನೆ. ತಂದೆ ಮೇಲಿನ ಹಳೇ ಧ‍್ವೇಷಕ್ಕೆ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಸಂಬಂಧಿಕರೇ ಈ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.