Select Your Language

Notifications

webdunia
webdunia
webdunia
webdunia

ವರ ಬೈಕ್ ಗೆ ಡಿಮ್ಯಾಂಡ್ ಮಾಡಿದ್ದಕ್ಕೆ ವಧು ಹೀಗೆ ಮಾಡೋದಾ!

ಅಪರಾಧ ಸುದ್ದಿಗಳು
ಲಕ್ನೋ , ಶನಿವಾರ, 13 ಮಾರ್ಚ್ 2021 (10:02 IST)
ಲಕ್ನೋ: ವರ ವರದಕ್ಷಿಣೆ ರೂಪದಲ್ಲಿ ಬೈಕ್ ಕೊಡಿಸುವಂತೆ ಮಾವನ ಮನೆಯವರಿಗೆ ಡಿಮ್ಯಾಂಡ್ ಮಾಡಿದ್ದಕ್ಕೆ ವಧು ಮನನೊಂದು ಸ್ವಯಂ ಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಬೈಕ್ ಕೊಡಿಸುವಂತೆ ವರ ಬೇಡಿಕೆಯಿಟ್ಟಿದ್ದ. ಆದರೆ ಇದನ್ನು ನೀಡಲು ವಧುವಿನ ಮನೆಯವರಿಗೆ ಶಕ್ತಿಯಿರಲಿಲ್ಲ. ಹೀಗಾಗಿ ಬೈಕ್ ಕೊಡಿಸಲ್ಲವೆಂದು ವರ ಮದುವೆಯನ್ನೇ ರದ್ದು ಮಾಡಿದ್ದ. ಇದರಿಂದ ವಧು ಮನನೊಂದಿದ್ದಳು.

ವಿಪರ್ಯಾಸವೆಂದರೆ ಇದು ಲವ್ ಕಮ್ ಅರೇಂಜ್ಡ್ ಮದುವೆಯಾಗಿತ್ತು. ಆದರೆ ಹಿರಿಯರೆಲ್ಲಾ ಕೂತು ಮದುವೆ ಮಾತುಕತೆಯಾಡುವ ವೇಳೆ ಬೈಕ್ ಕೊಡಿಸದೇ ಮದುವೆಯಾಗಲ್ಲವೆಂದು ವರ ಹಠ ಹಿಡಿದಿದ್ದ.ಮದುವೆಯಾದ ಮೇಲೆ ಕೊಡಿಸುವುದಾಗಿ ವರನ ಬಳಿ ಎಷ್ಟೇ ಕೇಳಿಕೊಂಡರೂ ಒಪ್ಪಿರಲಿಲ್ಲ. ಇದರಿಂದ ಮನನೊಂದ ವಧು ನೇಣಿಗೆ ಶರಣಾಗಿದ್ದಾಳೆ. ಇದೀಗ ವರ ನಾಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯ ಮೇಲೆ 6 ತಿಂಗಳಗಳ ಕಾಲ ಪದೇ ಪದೇ ಮಾನಭಂಗ ಎಸಗಿದ 7 ಮಂದಿ ಪುರುಷರು