Select Your Language

Notifications

webdunia
webdunia
webdunia
webdunia

ಧ್ರುವ ಸರ್ಜಾ ಕೈಯಲ್ಲಿ ಮಗು: ಸ್ಪಷ್ಟನೆ ಕೊಟ್ಟ ಮೇಘನಾ ರಾಜ್

ಧ್ರುವ ಸರ್ಜಾ ಕೈಯಲ್ಲಿ ಮಗು: ಸ್ಪಷ್ಟನೆ ಕೊಟ್ಟ ಮೇಘನಾ ರಾಜ್
ಬೆಂಗಳೂರು , ಶನಿವಾರ, 13 ಮಾರ್ಚ್ 2021 (10:35 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಮನೆಯಲ್ಲಿ ಮಗುವೊಂದನ್ನು ತೊಡೆಯ ಮೇಲಿರಿಸಿಕೊಂಡು ತಮ್ಮ ಪೊಗರು ಸಿನಿಮಾದ ಹಾಡು ವೀಕ್ಷಿಸುವ ದೃಶ್ಯವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.


ಈ ಮಗು ಚಿರಂಜೀವಿ ಸರ್ಜಾರದ್ದು ಎಂದು ಸುದ್ದಿಯಾಗಿತ್ತು. ಆದರೆ ಇದಕ್ಕೀಗ ಸ್ವತಃ ಧ‍್ರುವ ಅತ್ತಿಗೆ ಮೇಘನಾ ಸರ್ಜಾ ಸ್ಪಷ್ಟನೆ ನೀಡಿದ್ದಾರೆ. ಧ್ರುವ ಜೊತೆಗೆ ಅವರ ತಾಯಿಯೂ ವಿಡಿಯೋದಲ್ಲಿದ್ದರು. ಇದನ್ನು ನೋಡಿ ಅಣ್ಣನ ಮಗನ ಜೊತೆ ಧ್ರುವ ಪೊಗರು ಹಾಡು ವೀಕ್ಷಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ಕೊಟ್ಟಿರುವ ಮೇಘನಾ ಇದು ಬೇಬಿ ಚಿರು ಅಲ್ಲ ಎಂದಿದ್ದಾರೆ. ಈ ಹಿಂದೆಯೂ ಹಲವಾರು ಬಾರಿ ಬೇಬಿ ಚಿರು ಫೋಟೋ ಎಂದು ನಕಲಿ ಫೋಟೋ, ವಿಡಿಯೋಗಳು ಹರಿದಾಡಿತ್ತು. ಆಗೆಲ್ಲವೂ ಮೇಘನಾ ಸ್ಪಷ್ಟನೆ ನೀಡಬೇಕಾಗಿ ಬಂದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಾಬರ್ಟ್ ಗೆಲ್ಲಿಸಿದ ಸೆಲೆಬ್ರಿಟಿಗಳಿಗೆ ಧನ್ಯವಾದ ಸಲ್ಲಿಸಿದ ದಾಸ ದರ್ಶನ್