Publish Date: Sat, 13 Mar 2021 (10:14 IST)
Updated Date: Sat, 13 Mar 2021 (10:16 IST)
ಬೆಂಗಳೂರು: ರಾಬರ್ಟ್ ಸಿನಿಮಾ ನಿರೀಕ್ಷೆಯಂತೇ ಅಬ್ಬರದ ಗೆಲುವು ಕಂಡಿದೆ. ಈ ಗೆಲುವಿಗೆ ಡಿ ಬಾಸ್ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಮೊದಲ ದಿನವೇ ದಾಖಲೆಯ ಗಳಿಕೆ ಮಾಡುವ ಮೂಲಕ ರಾಬರ್ಟ್ ಈ ವರ್ಷದ ಸೂಪರ್ ಹಿಟ್ ಸಿನಿಮಾವಾಗುತ್ತಿದೆ. ಇದಕ್ಕೆ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ದರ್ಶನ್ ಧನ್ಯವಾದ ಸಲ್ಲಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ದರ್ಶನ್ ನಮ್ಮ ರಾಬರ್ಟ್ ಸಿನಿಮಾಗೆ ಒಳ್ಳೆ ಪ್ರಚಾರ ಕೊಟ್ಟು ಎಲ್ಲೆಡೆ ತಲುಪುವಂತೆ ಮಾಡಿದ ಮಾಧ‍್ಯಮದವರಿಗೆ ಧನ್ಯವಾದಗಳು. ಆನ್ಲೈನ್ ಮೀಡಿಯಾ ಮಿತ್ರರು ಮತ್ತು ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿದ ಪ್ರೋತ್ಸಾಹಕ್ಕೆ ಹೃದಯಪೂರ್ವಕ ಧನ್ಯವಾದಗಳು. ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯ ತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ಈ ದಾಸನ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.