Select Your Language

Notifications

webdunia
webdunia
webdunia
webdunia

ದರ್ಶನ್ ಸಹೋದರ ದಿನಕರ್ ಸಿನಿಮಾಗೆ ಪುನೀತ್ ನಾಯಕ

ದರ್ಶನ್ ಸಹೋದರ ದಿನಕರ್ ಸಿನಿಮಾಗೆ ಪುನೀತ್ ನಾಯಕ
ಬೆಂಗಳೂರು , ಶನಿವಾರ, 13 ಮಾರ್ಚ್ 2021 (09:57 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದೀಗ ಕನ್ ಫರ್ಮ್ ಆಗಿದೆ.


ದಿನಕರ್ ನಿರ್ದೇಶನದಲ್ಲಿ ಪುನೀತ್ ಅಭಿನಯಿಸುತ್ತಿರುವುದು ಪಕ್ಕಾ ಆಗಿದೆ. ಜಯಣ್ಣ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಈ ಸಿನಿಮಾದ ಉಳಿದ ವಿವರಗಳು ಸದ್ಯದಲ್ಲೇ ಹೊರಬೀಳಲಿವೆ.

ಈಗಾಗಲೇ ದಿನಕರ್-ಪುನೀತ್ ಹಾಗೂ ನಿರ್ಮಾಪಕ ಜಯಣ್ಣ ಭೇಟಿಯಾಗಿ ಸಿನಿಮಾ ಬಗ್ಗೆ ಚರ್ಚೆ ನಡೆಸಿದ್ದಾರೆ. ಸದ್ಯಕ್ಕೆ ಪುನೀತ್ ಯುವರತ್ನ ಪ್ರಮೋಷನ್, ಜೇಮ್ಸ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಸಂತೋಷ್ ಆನಂದ್ ರಾಮ್ ಜೊತೆಗೆ ಮತ್ತೊಂದು ಸಿನಿಮಾವನ್ನೂ ಅವರು ಒಪ್ಪಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿ ಹೊಸ ಸಿನಿಮಾ ಮುಹೂರ್ತ