Publish Date: Sat, 13 Mar 2021 (09:19 IST)
Updated Date: Sat, 13 Mar 2021 (09:22 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರತಂಡ ಕಝಕಿಸ್ತಾನದಲ್ಲಿ ಶೂಟಿಂಗ್ ಮುಗಿಸಿದೆ.
ಕಳೆದ ಕೆಲವು ದಿನಗಳಿಂದ ಕೆಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಿ ತವರಿಗೆ ವಾಪಸಾಗಿದೆ. ಕಝಕಿಸ್ತಾನದಲ್ಲಿ ಗಣೇಶ್, ದಿಗಂತ್, ಶರ್ಮಿಳಾ ಮಾಂಡ್ರೆ ಒಳಗೊಂಡ ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು.
ಲಾಕ್ ಡೌನ್ ಗಿಂತ ಮೊದಲು ಗಾಳಿಪಟ ತಂಡ ಕೆಲವೇ ಭಾಗದ ಚಿತ್ರೀಕರಣ ಬಾಕಿ ಉಳಿಸಿಕೊಂಡಿತ್ತು. ಅದನ್ನು ಕೊನೆಗೂ ಅಂದುಕೊಂಡಂತೇ ವಿದೇಶದಲ್ಲಿ ಮಾಡಿ ಮುಗಿಸಿದೆ. ಗಾಳಿಪಟ ಮೊದಲ ಭಾಗ ಭರ್ಜರಿ ಹಿಟ್ ಆಗಿತ್ತು. ಈ ಸಿನಿಮಾವೂ ಅದೇ ರೀತಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ಮತ್ತೊಂದು ಬ್ರೇಕ್ ತಂದುಕೊಡಬಹುದು ಎಂದು ನಿರೀಕ್ಷಿಸಲಾಗಿದೆ.