Select Your Language

Notifications

webdunia
webdunia
webdunia
webdunia

ರಾಬರ್ಟ್ ಅಬ್ಬರದ ನಡುವೆ ಮಂಕಾಯಿತೇ ಹೀರೋ?

ರಾಬರ್ಟ್ ಅಬ್ಬರದ ನಡುವೆ ಮಂಕಾಯಿತೇ ಹೀರೋ?
ಬೆಂಗಳೂರು , ಶನಿವಾರ, 13 ಮಾರ್ಚ್ 2021 (08:52 IST)
ಬೆಂಗಳೂರು: ಗಾಂಧಿನಗರದಲ್ಲಿ ಈಗ ಎಲ್ಲೆಲ್ಲಿ ನೋಡಿದರೂ ರಾಬರ್ಟ್ ಅಬ್ಬರ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಈ ಸಿನಿಮಾದ ಅಬ್ಬರದಲ್ಲಿ ಬೇರೆಲ್ಲಾ ಸಿನಿಮಾಗಳೂ ಧೂಳೀಪಟವಾದವೇ?


ರಾಬರ್ಟ್ ಸಿನಿಮಾ ಬಿಡುಗಡೆಯಾದ ಒಂದೇ ದಿನಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಸೇರಿದಂತೆ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.ಮುಂಗಡ ಬುಕಿಂಗ್ ಮೂಲಕವೂ ಟಿಕೆಟ್ ಸೋಲ್ಡ್ ಆಗಿತ್ತು. ಈ ಸಿನಿಮಾಕ್ಕೆ ಅದಕ್ಕೆ ತಕ್ಕ ಹಾಗೆ ಅಬ್ಬರದ ಪ್ರಚಾರವೂ ಸಿಕ್ಕಿತ್ತು.

ಆದರೆ ರಾಬರ್ಟ್ ಅಬ್ಬರದ ಮುಂದೆ ಕಳೆದ ವಾರ ಬಿಡುಗಡೆಯಾದ ಹೀರೋ ಸಿನಿಮಾ ಮಂಕಾಯ್ತೇನೋ ಎಂಬ ಅನುಮಾನ ಕಾಡ್ತಿದೆ. ರಿಷಬ್ ಶೆಟ್ಟಿ ಅಭಿನಯದ ಹೀರೋ ಸಿನಿಮಾದಲ್ಲಿ ಒಂದೊಳ್ಳೆ ಕತೆಯಿದೆ. ಆದರೆ ಆ ಸಿನಿಮಾ ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದಲ್ಲದೆ, ಚೇತರಿಸಿಕೊಳ್ಳುವ ಮೊದಲೇ ರಾಬರ್ಟ್ ಅಬ್ಬರದಲ್ಲಿ ಸಿಲುಕಿ ಮರೆಯಾಗುವ ಭೀತಿಯಲ್ಲಿದೆ.

ವಿಶೇಷವೆಂದರೆ ದರ್ಶನ್ ಹಾಗೂ ರಿಷಬ್ ಇಬ್ಬರೂ ಒಬ್ಬರೊಬ್ಬರ ಸಿನಿಮಾಗೆ ಪ್ರೋತ್ಸಾಹಕರ ಮಾತನಾಡಿದ್ದರು. ಆದರೆ ಪ್ರೇಕ್ಷಕರು ರಾಬರ್ಟ್ ಬಂದಾಗ ಆ ಸಿನಿಮಾ ಕಡೆಗೆ ಸಹಜವಾಗಿಯೇ ಹೆಚ್ಚು ಆಕರ್ಷಣೆ ತೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಬಹಿರಂಗಪಡಿಸಿದ ಕಮಲ್ ಹಾಸನ್