Publish Date: Fri, 12 Mar 2021 (11:05 IST)
Updated Date: Fri, 12 Mar 2021 (11:07 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಯನದ ಯುವರತ್ನ ಸಿನಿಮಾದ ಮತ್ತೊಂದು ಪವರ್ ಫುಲ್ ಹಾಡು ಇಂದು ರಿಲೀಸ್ ಆಗಿದೆ.
ಫೀಲ್ ದ ಪವರ್ ಹಾಡಿನ ಲಿರಿಕಲ್ ವಿಡಿಯೋ ಇಂದು ಬೆಳಿಗ್ಗೆ ರಿಲೀಸ್ ಆಗಿದೆ. ಈ ಪವರ್ ಫುಲ್ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಶಶಾಂಕ್ ಶೇಷಗಿರಿ ಹಾಡಿರುವ ಹಾಡನ್ನು ಸಂತೋಷ್ ಆನಂದ್ ರಾಮ್ ಬರೆದಿದ್ದಾರೆ.
ಈಗಾಗಲೇ ಯುವರತ್ನ ಸಿನಿಮಾದ ನಾಲ್ಕು ಹಾಡುಗಳು ಭರ್ಜರಿ ಹಿಟ್ ಆಗಿವೆ. ತಮನ್ ಎಸ್ ಸಂಗೀತ ಸಂಯೋಜಿಸಿರುವ ಎಲ್ಲಾ ಹಾಡುಗಳು ಉತ್ತಮವಾಗಿದೆ. ಹೀಗಾಗಿ ಸಿನಿಮಾ ಬಗ್ಗೆಯೂ ವೀಕ್ಷಕಲ್ಲಿ ಕುತೂಹಲ ಮೂಡಿದೆ.