Publish Date: Thu, 11 Mar 2021 (10:37 IST)
Updated Date: Thu, 11 Mar 2021 (10:39 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ತೆಲುಗಿಗೆ ಡಬ್ ಆಗುತ್ತಿದೆ. ಆದರೆ ತೆಲುಗಿನಲ್ಲಿ ಪುನೀತ್ ಪಾತ್ರಕ್ಕೆ ಅವರೇ ಡಬ್ಬಿಂಗ್ ಮಾಡ್ತಾರಾ?
ಈ ಬಗ್ಗೆ ನಿನ್ನೆ ಯುವರತ್ನ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಪುನೀತ್ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ತೆಲುಗು ಅಲ್ಪಸ್ವಲ್ಪ ಬರುತ್ತೆ. ಆದರೆ ನಿರರ್ಗಳವಾಗಿ ಮಾತನಾಡಲು ಬರಲ್ಲ. ಹೀಗಾಗಿ ನಾನು ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡಿದರೆ ಸರಿಯಾಗಲ್ಲ. ಬೇರೆಯರು, ಸ್ಪಷ್ಟವಾಗಿ ಮಾತನಾಡುವವರೇ ಡಬ್ಬಿಂಗ್ ಮಾಡ್ತಾರೆ ಎಂದು ಪುನೀತ್ ಹೇಳಿದ್ದಾರೆ.
ಏಪ್ರಿಲ್ 1 ರಂದು ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ಯುವ ಸಂಭ್ರಮ ಮಾರ್ಚ್ 20 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿದೆ. ಈ ದಿನವೇ ಚಿತ್ರದ ಟ್ರೈಲರ್ ಕೂಡಾ ರಿಲೀಸ್ ಆಗಲಿದೆ.
ಸಿನಿಮಾದಲ್ಲಿ ಪುನೀತ್ ಜೊತೆಗೆ ಸಯ್ಯೇಷಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಡಾಲಿ ಧನಂಜಯ್, ಸೋನು ಗೌಡ, ದಿಗಂತ್, ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.