Select Your Language

Notifications

webdunia
webdunia
webdunia
webdunia

ರಾಬರ್ಟ್ ಫಸ್ಟ್ ಡೇನೇ ದರ್ಶನ್ ಗೆ ಬೇಸರವಾಗುವಂತೆ ಮಾಡಿದ ಫ್ಯಾನ್ಸ್!

ರಾಬರ್ಟ್ ಫಸ್ಟ್ ಡೇನೇ ದರ್ಶನ್ ಗೆ ಬೇಸರವಾಗುವಂತೆ ಮಾಡಿದ ಫ್ಯಾನ್ಸ್!
ಬೆಂಗಳೂರು , ಗುರುವಾರ, 11 ಮಾರ್ಚ್ 2021 (11:40 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.


ಇನ್ನು, ಬಿಡುಗಡೆಯಾದ ಮೊದಲ ದಿನವೇ ಅಭಿಮಾನಿಗಳು ಕೆಲವೆಡೆ ದಾಂಧಲೆ ನಡೆಸಿದ್ದು, ತಮ್ಮ ಮೆಚ್ಚಿನ ಡಿ ಬಾಸ್ ಗೆ ಬೇಸರವಾಗುವಂತೆ ನಡೆದುಕೊಂಡಿದ್ದಾರೆ.

ಕೆಲವೆಡೆ ಟಿಕೆಟ್ ಸಿಗದೇ ರೊಚ್ಚಿಗೆದ್ದ ಅಭಿಮಾನಿಗಳು ಕಿಟಿಕಿ ಗಾಜುಗಳನ್ನು ಹೊಡೆದು ದಾಂಧಲೆ ನಡೆಸಿದ್ದಾರೆ. ಮತ್ತೆ ಕೆಲವೆಡೆ ನೂಕು ನುಗ್ಗಲು ನಿಯಂತ್ರಿಸಲು ಪೊಲೀಸರು ಲಾಠ ಪ್ರಯೋಗ ನಡೆಸಬೇಕಾಗಿ ಬಂದಿದೆ. ಆದಷ್ಟು ಶಾಂತವಾಗಿರಿ, ಯಾವುದೇ ವಿವಾದವಾಗುವಂತೆ ಮಾಡಬೇಡಿ ಎಂದು ದರ್ಶನ್ ಹೇಳಿದ್ದರೂ ಅಭಿಮಾನಿಗಳು ಅಭಿಮಾನದ ಪರಾಕಾಷ್ಠೆಯಲ್ಲಿ ಇದನ್ನೆಲ್ಲಾ ಮರೆತು ನಡೆದುಕೊಂಡಿದ್ದು ವಿಪರ್ಯಾಸ.

ವಿಶೇಷವೆಂದರೆ ಮತ್ತೆ ಕೆಲವೆಡೆ ದರ್ಶನ್ ಅಭಿಮಾನಿಗಳೇ ಸಿನಿಮಾ ನೋಡಲು ಬರುವ ಅಭಿಮಾನಿಗಳಿಗೆ ಊಟೋಪಚಾರದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಅಂತೂ ಮೊದಲ ದಿನವೇ ರಾಬರ್ಟ್ ಅಬ್ಬರ ಆರಂಭವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾದಲ್ಲಿ ಸ್ಯಾಂಡಲ್ ವುಡ್ ನ ಮತ್ತಷ್ಟು ಸ್ಟಾರ್ ನಟರು